ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ರಕ್ಷಾಬಂಧನ ಆಚರಣೆ

ಉಡುಪಿ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಉಡುಪಿ ಶಾಖೆ ಇದರ ಸಂಚಾಲಕಿ ಬಿ ಕೆ ಸುಮಾ ಹಾಗೂ ಶಾಖೆಯ ಪ್ರಮುಖರಾದ ಬಿ ಕೆ ರತ್ನಾಕರ್ ಕಿಣಿ, ಬಿ ಕೆ ಮಾಲಿನಿ, ಬಿ ಕೆ ಭಾಸ್ಕರ್, ಬಿ ಕೆ ಅಶ್ವಿನಿ ಹಾಗೂ ಬಿ ಕೆ ದೇವಕಿ ಇವರ ನೇತೃತ್ವದಲ್ಲಿ ಆ. 26ರಂದು ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ರಕ್ಷಾಬಂಧನ ಹಬ್ಬವನ್ನು ರಾಖಿ ಕಟ್ಟುವುದರ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್, ಕೆ.ಪಿ.ಸಿ.ಸಿ ವಕ್ತಾರೆ ವೆರೋನಿಕಾ ಕರ್ನೇಲಿಯೋ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಯೋಜಕಿ ರೋಶ್ನಿ ಓಲಿವರ್, ತೋನ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾ ರವೀಂದ್ರ, ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ ರಾಜ್, ಮುಖಂಡರಾದ ನಾಗೇಶ್ ಕುಮಾರ್ ಉದ್ಯಾವರ, ಗಣೇಶ್ ನೆರ್ಗಿ, ಸತೀಶ್ ಕುಮಾರ್ ಮಂಚಿ, ಕೀರ್ತಿ ಶೆಟ್ಟಿ, ಸುರೇಶ್ ಶೆಟ್ಟಿ ಬನ್ನಂಜೆ, ಸತೀಶ್ ಕೊಡವೂರು, ವತ್ಸಲಾ ವಿನೋದ್, ಶರತ್ ಶೆಟ್ಟಿ, ಅರ್ಚನಾ ದೇವಾಡಿಗ, ಉದಯ್ ಪಂದುಬೆಟ್ಟು, ಶ್ರೀನಿವಾಸ್ ಹೆಬ್ಬಾರ್, ಆನಂದ್ ಪೂಜಾರಿ, ಪ್ರಮೀಳಾ ಸುವರ್ಣ, ಸೂರ್ಯ ಸಾಲ್ಯಾನ್, ಶಂಕರ್ ನಾಯ್ಕ್, ಧನಪಾಲ್, ಸಾಯಿರಾಜ್ ಕಿದಿಯೂರು, ಲಕ್ಷ್ಮೀಶ್ ಶೆಟ್ಟಿ ಹಾಗೂ ಸಂಜಯ್ ಆಚಾರ್ಯ ಅವರು ಉಪಸ್ಥಿತರಿದ್ದರು.