ಕಾರ್ಕಳ: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸೇವಾಕೇಂದ್ರದಲ್ಲಿ ರಕ್ಷಾ ಬಂಧನದ ಕಾರ್ಯಕ್ರಮದಲ್ಲಿ ದಾವಣಗೆರೆ ಸೇವಾಕೇಂದ್ರದ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜೀ ಪ್ರವಚನ ನೀಡುತ್ತಾ, ಪರಮಾತ್ಮನ ರಕ್ಷಣೆಯೇ ಸತ್ಯ ರಕ್ಷಾ ಬಂಧನವಾಗಿದೆ. ಮಾನವರು ಯಾವುದೇ ಬಂಧನದಲ್ಲಿ ಇರಲು ಬಯಸುವುದಿಲ್ಲ, ಅದರೆ ಪರಮಾತ್ಮನ ರಕ್ಷಣೆಯ ಬಂಧನದಲ್ಲಿ ಇರಲು ಬಯಸುತ್ತಾರೆ.ಲೌಕಿಕ ಸಹೋದರ- ಸಹೋದರಿಯರು ಬೇರೆ ಬೇರೆ ಇದ್ದಾಗ ರಕ್ಷಣೆ ನೀಡಲು ಸಾಧ್ಯವಾಗುವುದಿಲ್ಲ. ನಮೆಲ್ಲರನ್ನೂ ರಕ್ಷಣೆ ಮಾಡುವವನು ಪರಮಾತ್ಮ ನಾವೆಲ್ಲರೂ ಅವನ ಮಕ್ಕಳು. ಈ ಸತ್ಯವನ್ನು ಅರಿತು ಬಾಳಬೇಕಾಗಿದೆ ಎಂದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದಎಲ್ಲರಿಗೂ ರಾಖಿ ಕಟ್ಟಲಾಯಿತು. ಬ್ರಹ್ಮಾಕುಮಾರಿ ವಸಂತಿ ಸ್ವಾಗತಿಸಿದ ಸೇವಾಕೇಂದ್ರದ ಸಂಚಾಲಕಿ ಬ್ರಹ್ಮಾಕುಮಾರಿ ವಿಜಯಲಕ್ಷ್ಮಿ ವಂದಿಸಿದರು.
ರಕ್ಷಾ ಬಂಧನದ ಅಂಗವಾಗಿ ಕಾರ್ಕಳದ ಶಾಸಕರು ಮತ್ತು ನಗರದ ತಹಸೀಲ್ದಾರ್, ತಾಲೂಕು ಕಚೇರಿ, ಪುರಸಭೆ ಕಚೇರಿ, ಬ್ಯಾಂಕ್ ಸಿಬಂದಿಗಳಿಗೆ, ವರ್ತಕರಿಗೆ, ಪೋಲಿಸ್ ಠಾಣಾಧಿಕಾರಿಯವರಿಗೆ ಮತ್ತು ತಾಲೂಕಿನ ಎಲ್ಲಾ ಕಚೇರಿಗಳಿಗೆ ರಾಖಿಯನ್ನು ಕಟ್ಟಿ ರಕ್ಷಾ ಬಂಧನದ ಸಂದೇಶವನ್ನು ನೀಡಲಾಯಿತು.