ರಾಜ್ಯೋತ್ಸವ ಪ್ರಶಸ್ತಿ ಸೇವಾ ಸಿಂಧು ಪೋರ್ಟಲ್ ನಲ್ಲಿ ನಾಮ ನಿರ್ದೇಶನಕ್ಕೆ ಅವಕಾಶ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2023 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಸಾಧಕರ ಹೆಸರುಗಳನ್ನು ಸಾರ್ವಜನಿಕರು ಸೇವಾ ಸಿಂಧು ಪೋರ್ಟಲ್ ನಲ್ಲಿ ನಾಮನಿರ್ದೇಶನ ಮಾಡಬಹುದಾಗಿದೆ. ಸೇವಾ ಸಿಂಧು ಪೋರ್ಟಲ್ ನ ವೆಬ್ಸೈಟ್ http://sevasindhu.karnataka.gov.in.

ನಾಮನಿರ್ದೇಶನದ ಅವಧಿಯು ದಿನಾಂಕ: 01-10- 2023ರಿಂದ ಪ್ರಾರಂಭವಾಗಿ ದಿನಾಂಕ 15-10-2023 ಕಡೆಯ ದಿನಾಂಕವಾಗಿರುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.