ವಿಶ್ವಕರ್ಮ ಸಮಾಜೋದ್ಧಾರಕ ಸಂಘ ರಾಜೀವನಗರ ಇದರ ವತಿಯಿಂದ ಋಗ್ ಉಪಾಕರ್ಮ ಕಾರ್ಯಕ್ರಮ ಸಂಘದ ಮಾಜಿ ಅಧ್ಯಕ್ಷ ವಾದಿರಾಜ ಆಚಾರ್ಯ ಅವರ ರಾಜೀವನಗರದ ನಿವಾಸದಲ್ಲಿ ಆ.3ರಂದು ನಡೆಯಿತು.
ಪುರೋಹಿತ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ನಡೆದವು. ಈ ಸಂದರ್ಭದಲ್ಲಿ ಸಮಾಜ ಬಾಂಧವರಿಗೆ ಯಜ್ನೋ ಪವಿತ್ರಧಾರಣೆ ಮಾಡಲಾಯಿತು.
ಸಂಘದ ಅಧ್ಯಕ್ಷ ದಯಾನಂದ ಆಚಾರ್ಯ ಉಪಾಧ್ಯಕ್ಷರಾದ ವಿಶ್ವಮೂರ್ತಿ ಆಚಾರ್ಯ, ಭಾಸ್ಕರ ಆಚಾರ್ಯ, ಕಾರ್ಯದರ್ಶಿ ಗಣೇಶ್ ಆಚಾರ್ಯ ರಾಜೀವನಗರ, ಕೋಶಾಧಿಕಾರಿ ಸೂರಜ್ ಕುಮಾರ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.












