ಸೆಂಗೋಲ್ ಅಳವಡಿಕೆಗೆ ಅಭಿನಂದನೆ ಸಲ್ಲಿಸಿದ ರಜನಿಕಾಂತ್; ಹೊಸ ಸಂಸತ್ ಭವನದಲ್ಲಿ ಅಖಂಡ ಭಾರತ ಭಿತ್ತಿ ಚಿತ್ರ

ನವದೆಹಲಿ: ಸಂಸತ್ ಭವನದಲ್ಲಿ ತಮಿಳುನಾಡಿನ ಚೋಳ ರಾಜರ ಅಧಿಕಾರ ಹಸ್ತಾಂತರದ ಪ್ರತೀಕವಾದ ಸೆಂಗೋಲ್ ಅಳವಡಿಸಿದ್ದಕ್ಕಾಗಿ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳಿದ್ದಾರೆ.

“ತಮಿಳಿನ ಶಕ್ತಿಯ ಸಾಂಪ್ರದಾಯಿಕ ಸಂಕೇತವಾದ ರಾಜದಂಡವು (ಸೆಂಗೊಲ್) ಭಾರತದ ಹೊಸ ಸಂಸತ್ತಿನ ಕಟ್ಟಡದಲ್ಲಿ ಪ್ರಕಾಶಮಾನವಾಗಿ ಹೊಳೆಯುತ್ತದೆ. ತಮಿಳರನ್ನು ಹೆಮ್ಮೆ ಪಡುವಂತೆ ಮಾಡಿದ್ದಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ನನ್ನ ಹೃದಯದ ಕೆಳಗಿನಿಂದ ಧನ್ಯವಾದಗಳು” ಎಂದು ರಜನಿಕಾಂತ್ ಟ್ವೀಟ್ ಮಾಡಿದ್ದಾರೆ.

ಅಲ್ಲದೆ, ಹಿಂದಿ ಚಿತ್ರನಟರಾದ ಶಾರುಖ್ ಖಾನ್, ಅಕ್ಷಯ್ ಕುಮಾರ್, ಅನುಪಮ್ ಖೇರ್ ಮುಂತಾದವರು ಕೂಡಾ ಹೊಸ ಸಂಸತ್ ಭವನ ನಿರ್ಮಾಣಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Image Image

ಹೊಸ ಸಂಸತ್ ಭವನದಲ್ಲಿ ಅಖಂಡ ಭಾರತ ಮತ್ತು ಸಾಮ್ರಾಟ ಚಂದ್ರಗುಪ್ತ ಮೌರ್ಯನ ಗುರುಗಳಾದ ಚಾಣಕ್ಯರ ಭಿತ್ತಿಚಿತ್ರಗಳನ್ನು ಅಳವಡಿಸಲಾಗಿದ್ದು ಇದಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Image

 

Image