ರಾಜಾಪುರ ಸಾರಸ್ವತ ಬ್ರಾಹ್ಮಣ ಮಹಿಳಾ ಮಂಡಳಿ ಲಕ್ಷ್ಮೀಪುರ: ರಜತ ಮಹೋತ್ಸವ ಸಂಭ್ರಮ

ಕಾರ್ಕಳ: ರಾಜಾಪುರ ಸಾರಸ್ವತ ಬ್ರಾಹ್ಮಣ ಮಹಿಳಾ ಮಂಡಳಿ ಲಕ್ಷ್ಮೀಪುರ ಇದರ ರಜತ ಮಹೋತ್ಸವವು ಮೇ.24 ಮತ್ತು ಮೇ.25 ರಂದು ಸಂಭ್ರಮದಿಂದ ಜರಗಿತು. ಸಭಾಧ್ಯಕ್ಷತೆಯ ವಹಿಸಿದ್ದ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಉಷಾ ನಾಯಕ್ ರವರು ಮಂಡಳಿಯು ಇಪ್ಪತ್ತೈದು ವರ್ಷಗಳಿಂದ ನಡೆದು ಬಂದ ದಾರಿಯ ಸಿಂಹಾವಲೋಕನ ಮಾಡುತ್ತಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶ್ರೀಮತಿ ಶಾರದ ವೈ ಶೇಣಿ, ಸಂಚಾಲಕರು, ಶಾರದಾಂಬ ವಿದ್ಯಾ ಸಂಸ್ಥೆಗಳು ಶೇಣಿ ಕಾಸರಗೋಡು ಇವರು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ನಮ್ಮ ಸಮಾಜದ ಮಹಿಳೆಯರ ಸ್ಥಿತಿಗತಿಯ ಬಗ್ಗೆ ಮಾತನಾಡುತ್ತಾ ಮಹಿಳಾ ಸಬಲೀಕರಣ ಅಗತ್ಯವಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಸಿ. ಎ. ಮಮತಾ ರಾವ್, ಉಪಾಧ್ಯಕ್ಷರು ಐ.ಸಿ.ಎ.ಐ. ಮಂಗಳೂರು, ಶ್ರೀಮತಿ ಮೋಹಿನಿ ನಾಯಕ್, ಮಾಜಿ ಅಧ್ಯಕ್ಷರು, ರಾ.ಸಾ. ಬ್ರಾ. ಮಹಿಳಾ ವೇದಿಕೆ ಮಣಿಪಾಲ, ಶ್ರೀಮತಿ ವರ್ಷ ನಾಯಕ್ ಶ್ರೀವರದ ಸಿದ್ಧಿ ವಿನಾಯಕ ಸೇವಾಮಂಡಲ ಡೊಂಬಿವಿಲಿ ಮುಂಬೈ, ಶ್ರೀಮತಿ ಸುಮಿತ್ರ, ಕಾರ್ಯದರ್ಶಿ ರಾ.ಸಾ. ಬ್ರಾ. ಸಂಘ ಮಣಿಪಾಲ, ಶ್ರೀಮತಿ ಸುಧಾ ಪ್ರಭು, ಜಂಟಿ ಕೋಶಾಧಿಕಾರಿ, ರಾ.ಸಾ.ಸಮಾಜ ಬೆಂಗಳೂರು, ಶ್ರೀಮತಿ ಇಂದುಮತಿ ವಾಗ್ಳೆ ರಾ.ಸಾ.ಬ್ರಾ. ಮಹಿಳಾ ಮಂಡಳಿ ಬೆಂಗಳೂರು, ಶ್ರೀಮತಿ ರೂಪ ನಾಯಕ್ ಅಧ್ಯಕ್ಷರು, ರಾ.ಸಾ. ಬ್ರಾ. ಮಹಿಳಾ ವೇದಿಕೆ ಮಣಿಪಾಲ, ಶ್ರೀಮತಿ ವನಿತಾ ನಾಯಕ್ ಅಧ್ಯಕ್ಷರು, ರಾ. ಸಾ. ಬ್ರಾ. ಮಹಿಳಾ ಮಂಡಳಿ, ಬಂಟಕಲ್ಲು, ಶ್ರೀಮತಿ ಇಂದಿರಾ ಕಾಮತ್ ರಾ. ಸಾ. ಬ್ರಾ. ಮಹಿಳಾ ಮಂಡಳಿ ಬೆಳಗಾಂ ಶ್ರೀಮತಿ ಸುಮ ನಾಯಕ್ ಮಾಜಿ ಅಧ್ಯಕ್ಷರು, ರಾ.ಸಾ.ಬ್ರಾ. ಸಂಘ ತೀರ್ಥಹಳ್ಳಿ ಉಪಸ್ಥಿತರಿದ್ದರು.

ಚೇತನ್ ನಾಯಕ್, ಆಡಳಿತ ಮೊಕ್ತೇಸರರು, ಬಾಲಕೃಷ್ಣ ನಾಯಕ್ ಅಧ್ಯಕ್ಷರು ರಾ.ಸಾ.ಸಂಘ ಲಕ್ಷ್ಮೀಪುರ ಉಪಸ್ಥಿತರಿದ್ದರು.

ಶ್ರೀಮತಿ ಇಂದುಮತಿ ಪ್ರಭು ಸ್ಥಾಪಕ ಅಧ್ಯಕ್ಷರು, ರಾ.ಸಾ. ಬ್ರಾ. ಮಹಿಳಾ ಮಂಡಳಿ ಲಕ್ಷ್ಮಿಪುರ, ಶ್ರೀಮತಿ ಶುಭಾವಾಗ್ಳೆ, ಸ್ಥಾಪಕ ಕೋಶಾಧಿಕಾರಿ, ರಾ. ಸಾ. ಬ್ರಾ. ಮಹಿಳಾ ಮಂಡಳಿ, ಲಕ್ಷ್ಮೀಪುರ ಮತ್ತು ಸಾಧಕ ಮಹಿಳೆಯರಾದ ಶ್ರೀಮತಿ ಮಾನಸ ವಾಗ್ಳೆ, ರಾಜರಾಜೇಶ್ವರಿ ಸಿಲ್ಕ್ಸ್, ಪಡುಬಿದ್ರಿ ಶ್ರೀಮತಿ ಕಾವ್ಯಶ್ರೀ ನಾಯಕ್, ಅಜೇರು, ಖ್ಯಾತ ಯಕ್ಷಗಾನ ಭಾಗವತರು, ಶ್ರೀಮತಿ ರಾಜೀವಿ ನಾಯಕ್, ರಿಕ್ಷಾ ಚಾಲಕಿ ಮತ್ತು ಸಮಾಜ ಸೇವಕಿ ಹಾಗೂ 2025- 26ನೇ ಶೈಕ್ಷಣಿಕ ಸಾಲಿನಲ್ಲಿ ರಾಜಾಪುರ ಸಮಾಜದ ಗರಿಷ್ಠ ಅಂಕಗಳಿಸಿದ ಮಹಾಲಕ್ಷ್ಮೀ ಭಾಗವ್ ಮತ್ತು ಧೃತಿ ನಾಯಕ್ ಹಾಗೂ ಪಿ.ಯು.ಸಿ.ಯಲ್ಲಿ ಸಮೀಕ್ಷಾ ಆರ್. ಮತ್ತು ಸ್ಮೃತಿ ದೊಂಡ್ಯೆ ಹಾಗೂ ರಾ. ಸಾ. ಬ್ರಾ. ಮಹಿಳಾ ಮಂಡಳಿಯ ಕೋಶಾಧಿಕಾರಿ ಶ್ರೀಮತಿ ಶೋಭಾ ಪ್ರಭು ಮತ್ತು ಮಂಡಳಿಯ ಅಧ್ಯಕ್ಷೆ ಶ್ರೀಮತಿ ಉಷಾ ನಾಯಕ್ ರವನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ವಿಚಾರ ಗೋಷ್ಠಿಯಲ್ಲಿ ಶ್ರೀಮತಿ ಗೀತಾ ವಾಗ್ಳೆ ಅಧ್ಯಕ್ಷರು ಶ್ರೀ ದುರ್ಗಾ ಚೆಂಡೆ ಬಳಗ ಬಂಟಕಲ್ಲು ಇವರು “ಅಮ್ಚಿ ಆರ್.ಎಸ್.ಬಿ. ಅಸ್ಮಿತೆ, ಅಮ್ಚಿ ಭಾಷಾ ಅಮ್ಚಿ ಸಂಸ್ಕೃತಿ”, ಶ್ರೀಮತಿ ವಿದ್ಯಾಲತಾ ಕನ್ನಡ ವಿಭಾಗ ಮುಖ್ಯಸ್ಥೆ ಎಸ್.ಎಂ.ಎಸ್. ಕಾಲೇಜು ಬ್ರಹ್ಮಾವರ, ಇವರು “ಮಹಿಳಾ ಸಬಲೀಕರಣ”, ಶ್ರೀಮತಿ ಡಾl ಶ್ರುತಿ ನಾಯಕ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ, ಬೆಂಗಳೂರು, ಇವರು, “ಮಹಿಳಾ ಆರೋಗ್ಯ ಜಾಗೃತಿ” ವಿಷಯದ ಬಗ್ಗೆ ಮಾತನಾಡಿದರು.

ಆರ್.ಎಸ್.ಬಿ. ಮಹಿಳಾ ಸಮಾಜದ ಮುಂಬೈ, ಬೆಳಗಾಂ, ಮಣಿಪಾಲ, ಬಂಟಕಲ್ಲು, ಹಾಗೂ ಲಕ್ಷ್ಮೀಪುರ ಇವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

ಮಂಡಳಿಯ ಸದಸ್ಯರಾದ ಶ್ರೀಮತಿ ರೇವತಿ ತೆಂಡುಲ್ಕರ್ ಹಾಗೂ ಶ್ರೀಮತಿ ವಿದ್ಯಾ ಪಾಟ್ಕರ್ ರವರು ಕಾರ್ಯಕ್ರಮ ನಿರ್ವಹಿಸಿದರು ಕುಮಾರಿ ಶ್ರೀನಿಧಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಶ್ರೀಮತಿ ಉಷಾ ನಾಯಕ್ ರವರು ಸ್ವಾಗತಿಸಿ, ವಂದಿಸಿದರು.