ಒಂದು ಮೊಟ್ಟೆಯ ಕಥೆ ಮತ್ತು ಗರುಡ ಗಮನ ವೃಷಭ ವಾಹನದಂತಹ ಆಫ್ ಬೀಟ್ ಸಿನಿಮಾಗಳನ್ನು ನೀಡಿ ಜನಮನ ಗೆದ್ದಂತಹ ರಾಜ್ ಬಿ ಶೆಟ್ಟಿ ಅವರ ಮುಂದಿನ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸೇಡಿನ ಕಥಾಹಂದರ ಹೊಂದಿರುವ ‘ಟೋಬಿ’ ಶೀರ್ಷಿಕೆಯ ಈ ಚಿತ್ರವನ್ನು ಬಾಸಿಲ್ ಅಲ್ಚಕ್ಕಲ್ ನಿರ್ದೇಶಿಸಲಿದ್ದಾರೆ. ಚಿತ್ರದ ಕಥೆಯನ್ನು ರಾಜ್ ಬಿ ಶೆಟ್ಟಿ ಬರೆದಿದ್ದು, ಮುಖ್ಯಭೂಮಿಕೆಯಲ್ಲಿ ಖುದ್ದು ಅಭಿನಯಿಸಲಿದ್ದಾರೆ.
ಪ್ರವೀಣ್ ಶ್ರೀಯಾನ್ ಅವರ ಛಾಯಾಗ್ರಹಣವಿರುವ ಟೋಬಿಗೆ ಮಿಧುನ್ ಮುಕುಂದನ್ ಸಂಗೀತ ನೀಡಿದ್ದಾರೆ.
ಒಂದು ಕುರಿಯ ಮೇಲೆ ತುಂಬಾ ಒತ್ತಡ ಹೇರಿದಾಗ ಆ ಕುರಿಯೂ ಕೂಡಾ ಮಾರಿಯಾಗಿ ಹಾಯಬಲ್ಲದು ಎನ್ನುವ ಸಂದೇಶವನ್ನು ಚಿತ್ರದ ಮೂಲಕ ರಾಜ್ ನೀಡುತ್ತಿದ್ದಾರೆ.
ಚಿತ್ರವನ್ನು ಲೈಟರ್ ಬುದ್ದ ಫಿಲ್ಮ್ಸ್ ಮತ್ತು ಅಗಸ್ತ್ಯ ಫಿಲ್ಮ್ಸ್ ನಿರ್ಮಾಣ ಮಾಡಿದೆ.
ಚೈತ್ರಾ ಆಚಾರ್, ಸಂಯುಕ್ತಾ ಹೊರ್ನಾಡ್ ಮುಖ್ಯಭೂಮಿಕೆಯಲ್ಲಿರಲಿದ್ದಾರೆ. ಚಿತ್ರವು ಆಗಸ್ಟ್ 25 ರಂದು ತೆರೆಕಾಣಲಿದೆ.