ಕೊಲಂಬೊ (ಶ್ರೀಲಂಕಾ): ಪಾಕಿಸ್ತಾನದ ವಿರುದ್ಧ ಲಂಕಾದ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ನಿನ್ನೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 356 ರನ್ ಕಲೆಹಾಕಿತ್ತು.ಶ್ರೀಲಂಕಾದ ದುನಿತ್ ವೆಲ್ಲಲಾಗೆ ಮತ್ತು ಚರಿತ್ ಅಸಲಂಕಾ ಅವರ ಆಕ್ರಮಣಕಾರಿ ಸ್ಪಿನ್ಗೆ ಭಾರತದ ಬ್ಯಾಟಿಂಗ್ ಬಲವೇ ಕುಸಿದಿದ್ದು, ಮೊದಲ ಇನ್ನಿಂಗ್ಸ್ ಅಂತ್ಯದ ವೇಳೆಗೆ ಮಳೆ ಅಡ್ಡಿ ಪಡಿಸಿದೆ. ಆದರೆ ಇಂದು ಅದೇ ಮೈದಾನದಲ್ಲಿ ಶ್ರೀಲಂಕಾದ ದುನಿತ್ ವೆಲ್ಲಲಾಗೆ ಮತ್ತು ಚರಿತ್ ಅಸಲಂಕಾ ಬೌಲಿಂಗ್ನಲ್ಲಿ ಭಾರತ ಬ್ಯಾಟಿಂಗ್ ವೈಫಲ್ಯ ಕಂಡಿತು. ನಾಯಕ ರೋಹಿತ್ ಶರ್ಮಾ ಅರ್ಧಶತಕ ಬಿಟ್ಟರೆ ಮತ್ತಾವ ಬ್ಯಾಟರ್ ಹೇಳಿಕೊಳ್ಳುವಂತ ಸ್ಕೋರ್ ಕಲೆಹಾಕಲಿಲ್ಲ. 47 ಓವರ್ಗೆ 9 ವಿಕೆಟ್ ಕಳೆದುಕೊಂಡು 197 ರನ್ ಗಳಿಸಿದ್ದಾಗ ಮಳೆ ಬಂದ ಕಾರಣ ಪಂದ್ಯವನ್ನು ಸ್ಥಗಿತಗಿಳಿಸಲಾಗಿದೆ. ಕ್ರೀಸ್ನಲ್ಲಿ 15 ರನ್ಗಳಿಸಿ ಅಕ್ಷರ್ ಪಟೇಲ್ ಮತ್ತು 2 ರನ್ ಗಳಿಸಿ ಆಡುತ್ತಿದ್ದಾರೆ.
ನಾಲ್ಕನೇ ಬ್ಯಾಟರ್ ಆಗಿ ರಾಹುಲ್ ಬದಲು ಇಶಾನ್ ಕಿಶನ್ ಬಡ್ತಿ ಪಡೆದು ಮೈದಾನಕ್ಕಿಳಿದರು, ಐದನೇ ಸ್ಥಾನದಲ್ಲಿ ರಾಹುಲ್ ಬಂದರು. ಈ ಜೋಡಿ 4ನೇ ವಿಕೆಟ್ಗೆ 50 ರನ್ನ ಜೊತೆಯಾಟ ಮಾಡಿ ಭರವಸೆ ಮೂಡಿಸಿತ್ತು. ನಿನ್ನೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಿ ಟೀಮ್ ಇಂಡಿಯಾಗೆ ಗ್ರೇಟ್ ಕಮ್ಬ್ಯಾಕ್ ಮಾಡಿದ್ದ ಕೆಎಲ್ ರಾಹುಲ್ 44 ಬಾಲ್ನಲ್ಲಿ 4 ಬೌಂಡರಿಯ ಸಹಾಯದಿಂದ 39 ರನ್ ಗಳಿಸಿ ಆಡುತ್ತಿದ್ದ ವೇಳೆ ದುನಿತ್ ವೆಲ್ಲಲಾಗೆ ನಾಲ್ಕನೇ ವಿಕೆಟ್ ಆಗಿ ಬಲಿಯಾದರು. ಅವರ ಬೆನ್ನಲ್ಲೇ 33 ರನ್ ಗಳಿಸಿದ್ದ ಇಶಾನ್ ಕಿಶನ್ ಸಹ ವಿಕೆಟ್ ಒಪ್ಪಿಸಿದರು.
8ನೇ ಸ್ಥಾನದ ವರೆಗೆ ಬ್ಯಾಟಿಂಗ್ ಬಲವನ್ನು ಭಾರತ ತಂಡದಲ್ಲಿ ಹೆಚ್ಚಿಸಿದರೂ ಕೆಳ ಕ್ರಮಾಂಕದಿಂದಲೂ ನೀರಸ ಬ್ಯಾಟಿಂಗ್ ಪ್ರದರ್ಶನ ಕಂಡು ಬಂತು. ಉಪನಾಯಕ ಹಾರ್ದಿಕ್ ಪಾಂಡ್ಯ ಮತ್ತು ಜಡೇಜಾ ಉತ್ತಮವಾಗಿ ಹೋರಾಡಲು ಪ್ರಯತ್ನಿಸಿದರಾದರೂ ಸ್ಕೋರ್ ಮಾಡಲಾಗಲಿಲ್ಲ. ಹಾರ್ದಿಕ್ ವೆಲ್ಲಲಾಗೆಗೆ ಐದನೇ ವಿಕೆಟ್ ಆಗಿ ಪೆವಿಲಿಯನ್ ದಾರಿ ಹಿಡಿದರು. ಜಡೇಜಾ ಅಸಲಂಕಾಗೆ ವಿಕೆಟ್ ನೀಡಿದರು. ನಂತರ ಕಣಕ್ಕಿಳಿದ ಬುಮ್ರಾ ಮತ್ತು ಕುಲ್ದೀಪ್ ವಿಕೆಟ್ಗಳನ್ನು ಅಸಲಂಕಾ ಪಡೆದು ಸಂಭ್ರಮಿಸಿದರು. ಕೊನೆಯ ವರೆಗೂ ಅಕ್ಷರ್ ಪಟೇಲ್ ತಮ್ಮ ಹೋರಾಟನ್ನು ತೋರಿಸಿದರಾದರೂ ಸ್ಕೋರ್ ಮಾಡುವಲ್ಲಿ ವಿಫಲರಾದರು. ಕ್ರೀಸ್ನಲ್ಲಿ 15 ರನ್ಗಳಿಸಿ ಅಕ್ಷರ್ ಪಟೇಲ್ ಮತ್ತು 2 ರನ್ ಗಳಿಸಿ ಆಡುತ್ತಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಮೈದಾನಕ್ಕಿಳಿದ ಭಾರತ ತಂಡ ಮೊದಲ ಪವರ್ ಪ್ಲೇನಲ್ಲಿ ಉತ್ತಮ ಪ್ರದರ್ಶನವನ್ನು ನೀಡಿತು. ಆರಂಭಿಕ ಯುವ ಬ್ಯಾಟರ್ ಶುಭಮನ್ ಗಿಲ್ ರನ್ಗಳಿಸಲು ಪರದಾಡಿದರು. ಆದರೆ ನಾಯಕ ರೋಹಿತ್ ಶರ್ಮಾ ತಮ್ಮ ಸಾಮಾನ್ಯ ಆಟವನ್ನು ಆಡಿದರು. ಇದರಿಂದ ಭಾರತ 10 ಓವರ್ಗೆ ವಿಕೆಟ್ ನಷ್ಟವಿಲ್ಲದೇ 65 ರನ್ ಗಳಸಿ ದೊಡ್ಡ ಮೊತ್ತಗಳಿಸುವ ಸಂದೇಶ ನೀಡಿತ್ತು. ಆದರೆ, ಎಲ್ಲಾ ಲೆಕ್ಕಾಚಾರವನ್ನು ಲಂಕಾದ ಸ್ಪಿನ್ನರ್ಗಳು ಬುಡಮೇಲು ಮಾಡಿದರು ಎಂದರೆ ತಪ್ಪಾಗದು.
ಪವರ್ ಪ್ಲೇ ಮುಗಿಯುತ್ತಿದ್ದಂತೆ ದಾಳಿಗೆ ಇಳಿದ ಲಂಕಾ ಸ್ಪಿನ್ನರ್ ದುನಿತ್ ವೆಲ್ಲಲಾಗೆ ಅತ್ಯದ್ಬುತ ಸ್ಪಿನ್ ದಾಳಿ ನಡೆಸಿದರು. ವೆಲ್ಲಲಾಗೆಯ ಸ್ಪಿನ್ಗೆ ಭಾರತದ ಅಗ್ರ ಕ್ರಮಾಂಕ ಇದ್ದಕ್ಕಿದ್ದಂತೆ ಕುಸಿಯಿತು. 12,14, 16ನೇ ಓವರ್ನಲ್ಲಿ ವೆಲ್ಲಲಾಗೆಗೆ ಕ್ರಮವಾಗಿ ಗಿಲ್, ವಿರಾಟ್, ರೋಹಿತ್ ವಿಕೆಟ್ ಒಪ್ಪಿಸಿದರು. ಪಾಕ್ ವಿರುದ್ಧ ಅರ್ಧಶತಕ ಗಳಿಸಿದ್ದ ಗಿಲ್ ಇಂದು 25 ಬಾಲ್ನಲ್ಲಿ 19 ರನ್ ಗಳಿಸಿ ಪೆವಿಲಿಯನ್ಗೆ ತೆರಳಿದರು. ನಿನ್ನೆ ಶತಕ ಸಿಡಿಸಿದ್ದ ವಿರಾಟ್ ಇಂದು 12ಗೆ 3 ರನ್ ಗಳಿಸಿ ವಿಕೆಟ್ ಕೊಟ್ಟರು. ನಾಯಕ ರೋಹಿತ್ ಶರ್ಮಾ 48 ಬಾಲ್ನಲ್ಲಿ 7 ಬೌಂಡರಿ ಮತ್ತು 2 ಸಿಕ್ಸ್ನಿಂದ 53 ಗಳಸಿ ಔಟ್ ಆದರು.