ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವತಿಯಿಂದ ಮಳೆ ನೀರು ಕೊಯ್ಲು ಮಾಹಿತಿ ಕಾರ್ಯಗಾರವು ಗುರುವಾರ ಸಾಲಿಗ್ರಾಮ ಪಟ್ಟಣ ಪಂಚಾಯತ್ನ ಸಭಾಂಗಣದಲ್ಲಿ ನಡೆಯಿತು.
ಭಾರತ್ ವಿಕಾಸ್ ಟ್ರಸ್ಟ್ನ ಸೀತಾರಾಮ ಶೆಟ್ಟಿ ಮತ್ತು ಜ್ಯೋತಿ ಸಾಲಿಗ್ರಾಮ ಇವರು ಮಳೆ ನೀರು ಕೊಯ್ಲು ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಪಟ್ಟಣ ಪಂಚಾಯತ್ನ ಮುಖ್ಯಾಧಿಕಾರಿಗಳು, ಸದಸ್ಯರು, ಬಿಲ್ಡಿಂಗ್ ಡಿಸೈನರ್, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಾರದಾ ಹಿರೇಮನಿ ಸ್ವಾಗತಿಸಿದರು. ಅರುಣ್ ಬಿ ವಂದಿಸಿದರು.