ನವದೆಹಲಿ:ರೈಲ್ವೇ ಪ್ರಯಾಣಿಕರಿಗೊಂದು ಕಹಿಸುದ್ದಿಯನ್ನು ಭಾರತೀಯ ರೈಲ್ವೇ ನೀಡಿದೆ. ಅದೇನೆಂದರೆ ಶೀಘ್ರವೇ ನೀವು ಮಾಡುವ ಆನ್ ಲೈನ್ ಟಿಕೇಟ್ ಬುಕ್ಕಿಂಗ್ ದುಬಾರಿಯಾಗಲಿದೆ.
ಯಸ್. ಆನ್‌ಲೈನ್ ಟಿಕೆಟ್ ಖರೀದಿ ವೇಳೆ ವಿಧಿಸುವ ಸೇವಾ ಶುಲ್ಕವನ್ನು ಮರು ಜಾರಿ ಮಾಡಲು ಐಆರ್‌ಸಿಟಿಸಿ ಗಂಭೀರ ಚಿಂತನೆ ನಡೆಸಿದೆ. ಸೇವಾ ಶುಲ್ಕ ಹಿಂದಕ್ಕೆ ಪಡೆದ ಪರಿಣಾಮ ಆಗುತ್ತಿರುವ ಸುಮಾರು 88 ಕೋಟಿ ರು. ನಷ್ಟಭರಿಸಲು ತನ್ನಿಂದ ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ಹೀಗಾಗಿ ಬೇರೆ ಉಪಾಯ ಕಾಣದ ಐಆರ್‌ಸಿಟಿಸಿ, ಆನ್‌ಲೈನ್ ಟಿಕೆಟ್ ಖರೀದಿಗೆ ಮತ್ತೆ ಸೇವಾ ಶುಲ್ಕ ಜಾರಿಗೆ ಚಿಂತನೆ ನಡೆಸಿದ್ದು ಸದ್ಯದಲ್ಲಿಯೇ ರೇಲ್ವೆ ಆನ್ ಲೈನ್ ಟಿಕೇಟ್ ದರ ದುಬಾರಿಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇಷ್ಟು ದಿನ ಆನ್‌ಲೈನ್‌ನಲ್ಲಿ ಸಾಮಾನ್ಯ ದರ್ಜೆ ಸ್ಲೀಪರ್ ಕ್ಲಾಸ್ ಟಿಕೆಟ್ ಖರೀದಿ ಮಾಡಿದರೆ ರೂ. 20 ಮತ್ತು ಹವಾನಿಯಂತ್ರಿಯ ಬೋಗಿಯ ಸೀಟು ಬುಕ್ ಮಾಡಿದರೆ 40 ರು. ಸೇವಾ ಶುಲ್ಕ ವಿಧಿಸಲಾಗುತ್ತಿತ್ತು. ಆದರೆ ಜನರನ್ನು ಆನ್‌ಲೈನ್ ಮೂಲಕ ಟಿಕೆಟ್ ಖರೀದಿಗೆ ಪ್ರೇರೇಪಿಸಲು ಸರ್ಕಾರ ಸೇವಾ ಶುಲ್ಕ ವಿಧಿಸುವುದನ್ನು ಕೈಬಿಟ್ಟಿತ್ತು. ಆದರೆ ಇದರಿಂದ ನಷ್ಟವಾಗುತ್ತಿತ್ತು ಎನ್ನಲಾಗಿದ್ದು ಆ ನಷ್ಟವನ್ನು ಭರಿಸಲು ನಿರ್ಧರಿಸಲಾಗಿದೆ












