ಕರಾವಳಿ ಕರ್ನಾಟಕಕ್ಕೆ ಅಕ್ಟೋಬರ್ ಅಂತ್ಯದೊಳಗೆ ಬರಲಿದೆ ವಂದೇ ಭಾರತ್ ಎಕ್ಸ್ ಪ್ರೆಸ್? ಸಂಸದರಿಗೆ ರೈಲ್ವೆ ಸಚಿವರ ಭರವಸೆ

ಉಡುಪಿ/ಮಂಗಳೂರು: ಕರಾವಳಿಯ ಜನರ ಬಹುದಿನದ ಬೇಡಿಕೆ ವಂದೇ ಭಾರತ್ ಎಕ್ಸ್ ಪ್ರೆಸ್ ಸೌಲಭ್ಯ. ಹಲವಾರು ತಾಂತ್ರಿಕ ಕಾರಣಗಳಿಂದ ಕರಾವಳಿಯ ಅವಳಿ ಜಿಲ್ಲೆಗಳಿಗೆ ವಂದೇ ಭಾರತ್ ಎಕ್ಸ್ ಪ್ರೆಸ್ ನ ಸೌಕರ್ಯ ಲಭಿಸಿಲ್ಲ. ಆದರೆ ಇದೀಗ ಮಂಗಳೂರು ಮತ್ತು ಮಡ್ ಗಾಂವ್(ಗೋವಾ) ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ಓಡುವ ನಿರೀಕ್ಷೆ ಇದೆ ಎಂದು ದ ಹಿಂದು ವರದಿ ಹೇಳಿದೆ.

ಈ ಬಗ್ಗೆ ದ.ಕ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದ್ದು ಶುಕ್ರವಾರ ಸಚಿವರು ಕರಾವಳಿ ಕರ್ನಾಟಕದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ಓಡುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.

ಇದರ ಜೊತೆ ಕರಾವಳಿಯ ಹಲವಾರು ಬೇಡಿಕೆಗಳ ಬಗ್ಗೆ ಸಚಿವರಿಗೆ ಸಂಸದರು ಮನವಿ ಸಲ್ಲಿಸಿದ್ದಾರೆ.