ಲಂಡನ್: ಮೇ 20 ಶುಕ್ರವಾರದಂದು ಲಂಡನ್‌ನಲ್ಲಿ ನಡೆದ “ಐಡಿಯಾಸ್ ಫಾರ್ ಇಂಡಿಯಾ” ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರದ ಭಾರತೀಯ ಜನತಾ ಪಕ್ಷ ಸರ್ಕಾರವನ್ನು ಟೀಕಿಸಿದ್ದಾರೆ. “ಭಾರತವು ಉತ್ತಮ ಸ್ಥಿತಿಯಲ್ಲಿಲ್ಲ” ಮತ್ತು ಪ್ರಧಾನಿ ನರೇಂದ್ರ ಮೋದಿ ” ಮಾತು ಕೇಳುವುದಿಲ್ಲ” ಎಂದು ಹೇಳಿರುವ ಅವರು ಭಾರತದ ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ ಮತ್ತು ಈ ದಾಳಿಯ ಪರಿಣಾಮವಾಗಿ ಭಾರತದ ರಾಜ್ಯಗಳು “ಸರ್ಕಾರದೊಂದಿಗೆ ಇನ್ನು ಮುಂದೆ ಮಾತುಕತೆ ನಡೆಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
The Prime Minister must have an attitude that 'I want to listen'.
And from there everything flows down.
But our Prime Minister doesn't LISTEN.
: Shri @RahulGandhi #IdeasForIndia pic.twitter.com/8b8AJKM9LD
— Congress (@INCIndia) May 21, 2022
ಈ ಸಂದರ್ಭದಲ್ಲಿ ಅವರು ತಮ್ಮ ಪಕ್ಷದ ಪ್ರಯತ್ನಗಳನ್ನು ಶ್ಲಾಘಿಸುತ್ತಾ, “ಕಾಂಗ್ರೆಸ್ ಧ್ರುವೀಕರಣದ ವಿರುದ್ಧ ಹೋರಾಡುತ್ತಿದೆ. ನಾವು ಜನರನ್ನು ಒಟ್ಟಿಗೆ ಸೇರಿಸುವ ಸ್ಥಾನವನ್ನು ಹೊಂದಿದ್ದೇವೆ. ಭಾರತದಲ್ಲಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಅದನ್ನು ಮಾಡುತ್ತಿವೆ” ಎಂದಿದ್ದಾರೆ.
Democracy in India is a global public good. We're the only people who have managed democracy at our unparalleled scale.
Had an enriching exchange on a wide range of topics at the #IdeasForIndia conference in London. pic.twitter.com/QyiIcdFfjN
— Rahul Gandhi (@RahulGandhi) May 20, 2022












