ದ್ವಿಭಾಷೆಯಲ್ಲಿ ದ್ವಿವೇದಿ ಸಿನಿಮಾ ರಿಲೀಸ್ ಗೆ ರೆಡಿ, ರಾಗಿಣಿಯ ‘ಶೀಲಾ’ ಸಿನಿಮಾ ಫಸ್ಟ್​ ಲುಕ್

ಬೆಂಗಳೂರು: ಈ ಶೀಲ ಪ್ಯಾನ್ ಇಂಡಿಯಾ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಕೇರಳ ಹಾಗೂ ಕರ್ನಾಟಕದಲ್ಲಿ ಚಿತ್ರೀಕರಣ ನಡೆದಿದೆ. ಪ್ರಸ್ತುತ ಫಸ್ಟ್ ಲುಕ್ ಬಿಡುಗಡೆಯಾಗಿದೆ. ವೀರ ಮದಕರಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ, ತನ್ನದೇ ಬೇಡಿಕೆ ಹೊಂದಿರುವ ನಟಿ ರಾಗಿಣಿ ದ್ವಿವೇದಿ.

ಸದ್ಯ ಕನ್ನಡ, ತಮಿಳು, ಹಿಂದಿ ಹಾಗೂ ಮಲೆಯಾಳಂ ಚಿತ್ರಗಳನ್ನು ಮಾಡುತ್ತಿರುವ ರಾಗಿಣಿ ದ್ವಿವೇದಿ ಇದೇ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಬಹುಭಾಷೆಯಲ್ಲಿ ನಟಿಸುತ್ತಿದ್ದ ಕನ್ನಡದ ನಟಿ ರಾಗಿಣಿ ದ್ವಿವೇದಿ ಮೊದಲ ಬಾರಿಗೆ ಶೀಲಾ ಎಂಬ ಪ್ಯಾನ್​ ಇಂಡಿಯಾ ಚಿತ್ರದಲ್ಲಿ ನಟಿಸಿದ್ದು, ಸಿನಿಮಾದ ಪೋಸ್ಟರ್​ ರಿಲೀಸ್​ ಆಗಿದೆ.

ಸದ್ಯದಲ್ಲೇ ಟ್ರೇಲರ್ ಬರಲಿದೆ ಎಂದು ರಾಗಿಣಿ ದ್ವಿವೇದಿ ತಿಳಿಸಿದ್ದಾರೆ. ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ಅಲ್ಲದೇ ಅವಿನಾಶ್, ಶೋಭ್ ರಾಜ್, ಚಿತ್ರಾ ಶೆಣೈ, ಮಹೇಶ್ ನಾಯರ್, ಶ್ರೀಪತಿ, ರಿಯಾಜ್ ಖಾನ್, ಅಬೆ ಡೇವಿಡ್, ಆರತಿ ಗೋಪಾಲ್ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.

ಕನ್ನಡ ಹಾಗೂ ಮಲೆಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ನಿರ್ಮಾಣ ಆಗಿರುವ ‘ಶೀಲ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ‌ ಆಗಿದೆ. ರಾಗಿಣಿ ದ್ವಿವೇದಿ “ಶೀಲ” ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಚಿತ್ರದ ಫಸ್ಟ್ ಲುಕ್ ನೋಡುಗರಲ್ಲಿ ಕುತೂಹಲ ಹುಟ್ಟಿಸಿದೆ. ಈ ಚಿತ್ರದ ಬಗ್ಗೆ ಮಾತನಾಡಿರೋ ರಾಗಿಣಿ ದ್ವಿವೇದಿ ಶೀಲ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಮಹಿಳಾ ಪ್ರಧಾನ ಚಿತ್ರವಾಗಿದೆ.

ನನ್ನ ಪಾತ್ರ ಚೆನ್ನಾಗಿದೆ. ಸಮಾಜದಲ್ಲಿ ಎದುರಾಗುವ ಸಾಕಷ್ಟು ಸವಾಲುಗಳನ್ನು ಹೆಣ್ಣು ಮಗಳೊಬ್ಬಳು ಹೇಗೆ ನಿಭಾಯಿಸುತ್ತಾಳೆ ಎಂಬುದು ಕಥಾಸಾರಾಂಶ‌.

ಆದರೆ ಅದನ್ನೆಲ್ಲ ಎದುರಿಸಿ ಮತ್ತೆ ಅದೇ ಸಿನಿಮಾರಂಗದಲ್ಲಿ ತಮ್ಮ ಛಾಪನ್ನು ಮೂಡಿಸುವಲ್ಲಿ ರಾಗಿಣಿ ಯಶಸ್ವಿಯಾದರು ಎಂದರೆ ತಪ್ಪಾಗಲಾರದು.

ಯಾಕೆಂದರೇ ಬರೀ ಕನ್ನಡ ಸಿನಿಮಾವಲ್ಲದೇ ಅವರು ಬಹುಭಾಷೆಯಲ್ಲಿಯೂ ಮುಖ್ಯ ಪಾತ್ರದಲ್ಲೇ ನಟನೆ ಮಾಡುತ್ತಿದ್ದು, ಬೇರೆ ರಾಜ್ಯದಲ್ಲಿಯೂ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತನ್ನ ಫಿಟ್​ನೆಸ್​ನಿಂದಲೇ ಅಟ್ರಾಕ್ಟ್​ ಮಾಡುವ ನಟಿ ರಾಗಿಣಿ ಸಿನಿಮಾ ಇಂಡಸ್ಟ್ರೀಗೆ ಸ್ಟ್ರಾಂಗ್​ ಕಮ್​ಬ್ಯಾಕ್ ಮಾಡಿದ್ದಾರೆ.​

ಸಂಕಷ್ಟಗಳಿಂದ ಕಮ್​ ಬ್ಯಾಕ್​ ಆದ ರಾ’ಗಿಣಿ’: ಹೌದು ಒಮ್ಮೆ ಸಿನಿಮಾ ರಂಗದಲ್ಲಿ ತನ್ನ ನಟನೆಯಿಂದ ಪಡ್ಡೇ ಹುಡುಗರನ್ನೆಲ್ಲಾ ನಿದ್ದೆಗೆಡಿಸಿದ ನಟಿ ರಾಗಿಣಿ ಕೆಲವು ವಿಚಾರಗಳಿಂದ ಪೊಲೀಸ್​, ಕೋರ್ಟ್, ತನಿಖೆ ಅಂತ ಸದಾ ಸುದ್ದಿಯಲ್ಲಿದ್ದರು.

ಆ ವೇಳೆ, ಇನ್ನು ಮುಂದೆ ರಾಗಿಣಿಗೆ ಸಿನಿಮಾಗಳು ಸಿಗೋದೇ ಕಷ್ಟ, ಸಿನಿ ಭವಿಷ್ಯ ತುಪ್ಪದ ಬೆಡಗಿಗಿಲ್ಲ ಇಲ್ಲ ಎಂದವರೇ ಜಾಸ್ತಿ.
ಶೀಲ ಚಿತ್ರದ ಫಸ್ಟ್​ ಲುಕ್​ನಲ್ಲಿ ರಾಗಿಣಿ​ ರಕ್ತಸಿಕ್ತ ರೂಪದಲ್ಲಿದ್ದು, ಪೋಸ್ಟರ್​ನಿಂದ ಅಭಿಮಾನಿಗಳಲ್ಲಿ ಸಿನಿಮಾ ಕುರಿತಾದ ಕುತೂಹಲ ಹೆಚ್ಚಾಗಿದೆ.

ಈಗಾಗಲೇ ಮಾಲಿವುಡ್​ನಲ್ಲಿ ಈ ಮೊದಲು ಕಂದಹಾರ್​ ಮತ್ತು ಫೇಸ್​ ಟು ಫೆಸ್​ ಎಂಬ 2 ಸಿನಿಮಾ ಮಾಡಿದ್ದು, ಶೀಲಾ ಚಿತ್ರ ರಾಗಿಣಿಗೆ ಮಲಯಾಳಂನಲ್ಲಿ 3 ನೇಯದ್ದಾಗಿದೆ. ಡಿ.ಎಂ.ಪಿಳ್ಳೆ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಬಾಲು ನಾರಾಯಣನ್ ನಿರ್ದೇಶಿಸಿದ್ದಾರೆ.

ಈ ಚಿತ್ರ ಕನ್ನಡ ಹಾಗೂ ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.