ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜುನಲ್ಲಿ ಇಂದು ‘ರೇಡಿಯೋ ಕುಂದಾಪ್ರ’ ಲಾಂಛನ ಹಾಗೂ ಅಧಿಕೃತ ರಾಗ ಬಿಡುಗಡೆ ಸಮಾರಂಭ

ಕುಂದಾಪುರ: ಕುಂದಾಪುರ ಭಂಡಾರ್ ಕಾರ್ಸ ಕಲಾ ಮತ್ತು ವಿಜ್ಞಾನ ಕಾಲೇಜುನಲ್ಲಿ ರೇಡಿಯೋ ಕುಂದಾಪ್ರ ಲಾಂಛನ ಹಾಗೂ ಅಧಿಕೃತ ರಾಗ ಬಿಡುಗಡೆ ಸಮಾರಂಭ ಅ.27 ಮಧ್ಯಾಹ್ನ 3 ಗಂಟೆಗೆ ಆರ್.ಎನ್. ಶೆಟ್ಟಿ ಹಾಲ್, ಭಂಡಾರ್ ಕಾರ್ಸ ಕಾಲೇಜುನಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆ: ಶ್ರೀ ಎ.ಎಸ್.ಎನ್. ಹೆಬ್ಬಾರ್ ಮಾಜಿ ಅಧ್ಯಕ್ಷರು, ಕ.ಸಾ.ಪ ಉಡುಪಿ ಜಿಲ್ಲೆ.

ಸಮಾರಂಭ ಉದ್ಘಾಟನೆ: ಶ್ರೀ ಕೆ. ಶಾಂತರಾಮ ಪ್ರಭು ಹಿರಿಯ ಸದಸ್ಯರು, ವಿಶ್ವಸ್ಥ ಮಂಡಳಿ

ಲಾಂಛನ ಬಿಡುಗಡೆ: ಶ್ರೀ ರವಿ ಬಸ್ರೂರು ಪ್ರಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕರು

ಸಿಗ್ನೇಚರ್ ಟ್ಯೂನ್ ಬಿಡುಗಡೆ: ಶ್ರೀ ಓಂ ಗಣೇಶ್ ಜಾದೂಗಾರರು, ಸಾಹಿತಿ, ಉಪ್ಪುಂದ ಇವರು ನಡೆಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಸರ್ವರಿಗೂ ಹಾರ್ದಿಕ ಸ್ವಾಗತ ಬಯಸುವ ಡಾ. ರಂಜನ್ ಆರ್.ಪೈ ಕುಲ ಸಚಿವರು, ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ, ಡಾ. ಹೆಚ್.ಎಸ್.ಬಲ್ಲಾಳ್ ಅಧ್ಯಕ್ಷರು, ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ, ಡಾ. ಶುಭಕರಾಚಾರಿ ಪ್ರಾಂಶುಪಾಲರು ಪದವಿ ಕಾಲೇಜು, ಡಾ.ಜಿ.ಎಂ.ಗೊಂಡ ಪ್ರಾಂಶುಪಾಲರು, ಪದವಿ ಪೂರ್ವ ಕಾಲೇಜು, ವಿಶ್ವಸ್ಥರು, ಆಡಳಿತ ಮಂಡಳಿ, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ ವೃಂದ.