ಉಡುಪಿ: ಸದ್ಯ ತಾಯ್ತನ ಎಂಜಾಯ್ ಮಾಡುತ್ತಿರುವ ರಾಧಿಕಾ ಪಂಡಿತ್ ಸಿನಿ ರಂಗದಿಂದ ಸ್ವಲ್ಪ ದೂರವಿದ್ದರೂ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಟಚ್ನಲ್ಲಿದ್ದಾರೆ.
ಹೌದು ಇದೀಗ ಫೇಸ್ಬುಕ್ನಲ್ಲಿ ಸಕ್ರೀಯರಾಗಿರುವ ನಟಿ ರಾಧಿಕಾ ಪಂಡಿತ್ ತಮ್ಮ ಮಕ್ಕಳ ಜತೆ ಕಳೆಯುತ್ತಿರುವ ಅದ್ಭುತ ಕ್ಷಣಗಳನ್ನ ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಿದ್ದಾರೆ. ಪ್ರತೀ ಬಾರಿ ಐರಾ ವಿಡಿಯೋ ಅಪ್ಲೋಡ್ ಮಾಡುತ್ತಿದ್ದ ರಾಧಿಕಾ ಇದೀಗ ತಮ್ಮ ಇಬ್ಬರು ಮಕ್ಕಳ ಕ್ಯೂಟ್ ವಿಡಿಯೋವೊಂದನ್ನ ಶೇರ್ ಮಾಡಿಕೊಂಡಿದ್ದಾರೆ.
ಇನ್ನು ಈ ವಿಡಿಯೋದಲ್ಲಿ ಅಕ್ಕ ಐರಾ ತನ್ನ ತಮ್ಮನನ್ನ ಮಡಿಲಲ್ಲಿ ಮಲಗಸಿ ಮುದ್ದಾಡಿದ್ದಾಳೆ. ತನ್ನ ತೊದಲು ನುಡಿಯಲ್ಲಿ ಕಂದನಿಗೆ ಜೋಗುಳ ಹಾಡಿದ್ದಾಳೆ. ಈ ಮುದ್ದಾದ ವಿಡಿಯೋವನ್ನ ರಾಧಿಕಾ ಪಂಡಿತ್ ತಮ್ಮ ಫೇಸ್ಬುಕ್ ಪೇಜ್ನಲ್ಲಿ ಹಾಕಿಕೊಂಡಿದ್ದಾರೆ. ಜತೆಗೆ ಇವತ್ತು ನಮ್ಮ ಹೆಣ್ಣು ಮಗು 18 ತಿಂಗಳಿಗೆ ಕಾಲಿಡುತ್ತಿದ್ದಾಳೆ. ಈ ಚಿಕ್ಕ ಬೇಬಿ ಸಿಟ್ಟರ್ ನಿಮ್ಮ ಮುಖದಲ್ಲಿ ನಗುತ್ತರಿಸುತ್ತಾಳೆಂದು ನಾವು ಭಾವಿಸುತ್ತೇವೆ ಹಾಗೂ ಐರಾ ಪಕ್ಕಾ ನನ್ನ ತಂದೆಯನ್ನ ಅನುಕರಣೆ ಮಾಡುತ್ತಿದ್ದಾಳೆ ಎಂದು ವಿಡಿಯೋ ಜತೆ ಬರೆದುಕೊಂಡಿದ್ದಾರೆ.