ಮಣಿಪಾಲ: ಆರ್. ಎಸ್. ಬಿ. ಮಹಿಳಾ ವೇದಿಕೆ (ರಿ) ಮಣಿಪಾಲ ಇದರ ವಾರ್ಷಿಕ ಮಹಾಸಭೆಯು ಅಗಸ್ಟ್ 3 ರಂದು ಆರ್.ಎಸ್ ಬಿ ಸಭಾಭವನ ಮಣಿಪಾಲದಲ್ಲಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ರೂಪಾ ನಾಯಕ್ ರವರ ಅಧ್ಯಕ್ಷತೆಯಲ್ಲಿ ಜರಗಿತು. ಭಾರತಿ ನಾಯಕ್ ಮತ್ತು ಪ್ರೀತಿ ಕಾಮತ್ ರವರ ಪ್ರಾರ್ಥನೆಯೊಂದಿಗೆ ಸಭೆ ಆರಂಭಿಸಲಾಯಿತು.
ಉಪಾಧ್ಯಕ್ಷೆ ಉಜ್ವಲಾ ನಾಯಕ್ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಿಕಾ ನಾಯಕ್ ವರದಿ ಮಂಡಿಸಿದರು. ಕೋಶಾಧಿಕಾರಿ ಪುಷ್ಪ ಪ್ರಭು ಆಯ ವ್ಯಯ ಮಂಡಿಸಿದರು.
ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಹಾಗೂ ಆರ್ಥಿಕವಾಗಿ ಹಿಂದುಳಿದ ಮೂವರು ಮಹಿಳೆಯರಿಗೆ ಸಹಾಯಧನವನ್ನು ನೀಡಲಾಯಿತು. ನಂತರ ಬ್ರಹ್ಮ ಕುಮಾರಿಸ್ ಮಣಿಪಾಲ ಶಾಖೆ ಇವರಿಂದ ರಕ್ಷಾ ಬಂಧನ ಕಾರ್ಯಕ್ರಮ ಜರುಗಿತು. ಆರ್ಥಿಕವಾಗಿ ಹಿಂದುಳಿದ ಸುಮಾರು 60 ವಿಧ್ಯಾರ್ಥಿಗಳಿಗೆ ಸಹಾಯ ಧನವನ್ನು ನೀಡಲಾಯಿತು. ಸುಮಿತ್ರಾ ಹೆಚ್ ನಾಯಕ್ ಮತ್ತು ಸೌಮ್ಯ ಸತೀಶ್ ಕಾರ್ಯಕ್ರಮ ನಿರೂಪಿಸಿದರು ಜ್ಯೋತಿ ನಾಯಕ್ ವಂದಿಸಿದರು.












