ಆರ್ ಅಶ್ವಿನ್: ಆರಂಭಿಕ ಪಂದ್ಯಕ್ಕೆ ನನ್ನ ವಿಶ್ವಕಪ್ ಅಭಿಯಾನ ಅಂತ್ಯವಾಗುತ್ತದೆ ಎಂದುಕೊಂಡಿರಲಿಲ್ಲ

“ನಾನು ವಿಶ್ವಕಪ್‌ನಲ್ಲಿ ಚೆನ್ನೈನಲ್ಲಿ ಆಡಿದ ಒಂದೇ ಪಂದ್ಯದಲ್ಲಿ ಮುಕ್ತಾಯವಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಯಾಕೆಂದರೆ ನಾನು ಬಹಳ ಅದ್ಭುತವಾದ ಲಯದಲ್ಲಿ ಬೌಲಿಂಗ್ ನಡೆಸಿದ್ದೆ” ಎಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್.

ಈ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯವನ್ನು ಭಾರತ ಆಸ್ಟ್ರೇಲಿಯಾ ತಂಡದ ವಿರುದ್ಧ ಲೀಗ್ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಡಿತ್ತು. ಆ ಪಂದ್ಯದಲ್ಲಿ ಮಾತ್ರವೇ ಅನುಭವಿ ಆರ್ ಅಶ್ವಿನ್ ಭಾರತ ತಂಡದ ಪರವಾಗಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಧರ್ಮಾಲಾದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ತಾನು ಕಣಕ್ಕಿಳಿಯಬೇಕಾಗಿತ್ತು ಎಂದು ವಿವರಿಸಿದ ಆರ್ ಅಶ್ವಿನ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಕ್ಕೆ ತುತ್ತಾಗಿದ್ದು ಅನಿವಾರ್ಯವಾಗಿ ಸಂಯೋಜನೆಯನ್ನು ಬದಲಾವಣೆ ಮಾಡಬೇಕಾಯಿತು ಎಂದು ವಿವರಿಸಿದ್ದಾರೆ.ಅದಾದ ಬಳಿಕ ಭಾರತದ ಆಡುವ ಬಳಗದಲ್ಲಿ ಅಶ್ವಿನ್‌ಗೆ ಸ್ಥಾನ ದೊರೆತಿರಲಿಲ್ಲ.ಟೀಮ್ ಇಂಡಿಯಾದ ಅನುಭವಿ ಆಟಗಾರ ಆರ್ ಅಶ್ವಿನ್ ವಿಶ್ವಕಪ್ ಟೂರ್ನಿಯ ವಿಚಾರವಾಗಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಈ ಟೂರ್ನಿಯಲ್ಲಿ ತಾವು ಒಂದು ಪಂದ್ಯದಲ್ಲಿ ಮಾತ್ರವೇ ಆಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಮೊದಲ ಪಂದ್ಯವೇ ಈ ವಿಶ್ವಕಪ್‌ನ ಕೊನೆಯ ಪಂದ್ಯವೂ ಆಗಿರುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಆರ್ ಅಶ್ವಿನ್ ಭಾರತ ತಂಡ ಮನರಂಜನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಡುತ್ತಿದೆ ಎಂದು ಅಶ್ವಿನ್ ಶ್ಲಾಘಿಸಿದರು. ಇನ್ನು ನಾಯಕ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ವಿಶ್ವಕಪ್‌ಗೆ ಮುಂಚಿತವಾಗಿ ಪ್ರತಿಯೊಂದು ವಿಚಾರದ ಬಗ್ಗೆಯೂ ಯೋಜನೆ ಹೊಂದಿದ್ದರು ಎಂದಿದ್ದಾರೆ ಆರ್ ಅಶ್ವಿನ್. “ನಾನು ನ್ಯೂಜಿಲೆಂಡ್ ವಿರುದ್ಧ ಶರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಬೇಕಾಗಿತ್ತು. ಆದರೆ ಅದಕ್ಕೂ ಮುನ್ನ ಹಾರ್ದಿಕ್ ಗಾಯಕ್ಕೆ ತುತ್ತಾದರು. ಹಾರ್ದಿಕ್ ಅವರಂಥಾ ಮತ್ತೊಬ್ಬ ಆಲ್‌ರೌಂಡರ್ ತಂಡದಲ್ಲಿ ಇಲ್ಲದಿದ್ದ ಕಾರಣ ಅವರು ಬಹಳ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದರು. ಹಾಗಾಗಿ ಸಂಯೋಜನೆಯಲ್ಲಿಒ ಬದಲಾವಣೆ ಮಾಡುವುದು ಅನಿವಾರ್ಯಯವಾಗಿತ್ತು” ಎಂದಿದ್ದಾರೆ ಆರ್ ಅಶ್ವಿನ್.