ಕುಕ್ಕುಂದೂರು: ಗಂಡ ಹೆಂಡತಿಯ ಜಗಳವು ಹೆಂಡತಿಯ ಸಾವಿನಲ್ಲಿ ಅಂತ್ಯ ಕಂಡ ದಾರುಣ ಘಟನೆ ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಎಂಬಲ್ಲಿ ಮೇ 3 ರಂದು ಬೆಳಿಗ್ಗೆ ನಡೆದಿದೆ.
ಮೃತರನ್ನು ಜೋಡುರಸ್ತೆಯ 28 ವರ್ಷದ ಶೋಭಾ ಎಂದು ಗುರುತಿಸಲಾಗಿದೆ. ಇವರ ಪತಿ ಲೋಕೇಶ್ ಎಂಬವರು ನಿನ್ನೆ ಬೆಳಿಗ್ಗೆ ಮದ್ಯಪಾನ ಮಾಡಿಕೊಂಡು ಬಂದು ಶೋಭಾ ಅವರ ಬಳಿ ಜಗಳವಾಡಿದ್ದರು. ಇದರಿಂದ ಮನನೊಂದ ಶೋಭಾ ಮನೆಯ ಕೋಣೆಗೆ ತೆರಳಿ ಚಿಲಕ ಹಾಕಿಕೊಂಡು ಮಾಡಿನ ಶೀಟಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
								 
															





 
															 
															 
															











