udupixpress
Home Trending ಮನುಷ್ಯರಾಯ್ತು ಇದೀಗ ಜಾನುವಾರುಗಳಿಗೂ ಕ್ವಾರಂಟೈನ್.!

ಮನುಷ್ಯರಾಯ್ತು ಇದೀಗ ಜಾನುವಾರುಗಳಿಗೂ ಕ್ವಾರಂಟೈನ್.!

ಗುರುಮಠಕಲ್: ಕೊರೊನಾ ಸೋಂಕಿತರು ಕ್ವಾರಂಟೈನ್ ಆಗುತ್ತಿರುವ ಸಂದರ್ಭದಲ್ಲುಯೇ ಇದೀಗ ಜಾನುವಾರುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ವಿಚಿತ್ರ ರೋಗದಿಂದಾಗಿ ಅವುಗಳನ್ನು ಕ್ವಾರಂಟೈನ್ ಮಾಡಲಾಗುತ್ತಿದೆ.

ಗುರುಮಠಕಲ್ ನ ಕೆಲವೊಂದು ಹಳ್ಳಿಗಳಲ್ಲಿ ಜಾನುವಾರುಗಳಿಗೆ ಲಂಪಿ ಎಂಬ ಚರ್ಮ ರೋಗ ಕಾಣಿಸಿಕೊಂಡಿದೆ. ಇದೊಂದು ಹರಡುವ ಕಾಯಿಲೆಯಾಗಿರುವ ಕಾರಣ ಅವುಗಳನ್ನು ಕ್ವಾರಂಟೈನ್ ಮಾಡಲಾಗುತ್ತಿದೆ.

ಜಾನುವಾರುಗಳ ಬಾಯಿಯಲ್ಲಿ ಗುಳ್ಳೆ, ಮೈಯಲ್ಲಿ ಗುಳ್ಳೆ, ಕಾಲಿನಲ್ಲಿಯೂ ಗುಳ್ಳೆಗಳು ಉಂಟಾಗಿ ಮೇವು ಮೇಯದಂತೆ, ನಡೆಯದಂತೆ ಆಗಿ ನರಳುವಂತಾಗಿದೆ. ಇದರಿಂದ ರೈತರು ಕಂಗಲಾಗಿದ್ದಾರೆ.

ಪಶು ವೈದ್ಯರ ಸೂಚನೆಯ ಮೇರೆಗೆ ರೈತರು ಈಗ ರಾಸುಗಳನ್ನು ಕ್ವಾರಂಟೈನ್ ಮಾಡಿದ್ದಾರೆ. ರೋಗ ತಗುಲಿದಂತ ದನಗಳನ್ನು ಪ್ರತ್ಯೇಕವಾಗಿರಿಸಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತ ಮೇವು, ಔಷಧಿಗಳನ್ನು ನೀಡುತ್ತಿದ್ದಾರೆ.

ತಾಲ್ಲೂಕಿನ ಸುಮಾರು 1 ಸಾವಿರ ಜಾನುವಾರುಗಳಲ್ಲಿ ಲಂಪಿ ಚರ್ಮ ರೋಗ ಕಂಡು ಬಂದಿದ್ದು, ರೋಗ ಲಕ್ಷಣ ಕಾಣಿಸಿಕೊಂಡ ರಾಸುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರೋಗದ ಬಗ್ಗೆ ಆತಂಕ ಬೇಡ ಎಂದು ಪಶುವೈದ್ಯ ಮಂಜುನಾಥ್ ತಿಳಿಸಿದ್ದಾರೆ.