ಬರ್ಮಿಂಗ್ಹ್ಯಾಮ್: ಇಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ಅದ್ಭುತ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಭಾರತದ ಷಟ್ಲರ್ ಪಿವಿ ಸಿಂಧು ಅವರು ಫೈನಲ್ನಲ್ಲಿ ಮಿಚೆಲ್ ಲೀ ಅವರನ್ನು 21-15, 21-13 ಸೆಟ್ ಗಳಿಂದ ಸೋಲಿಸುವ ಮೂಲಕ ದೇಶವೆ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಇದು ಆಕೆಯ ಚೊಚ್ಚಲ ಚಿನ್ನದ ಪದಕವಾಗಿದೆ. ಈ ಹಿಂದೆ 2014 ಗ್ಲಾಸ್ಗೋದಲ್ಲಿ ಕಂಚು ಮತ್ತು 2018 ಗೋಲ್ಡ್ ಕೋಸ್ಟ್ನಲ್ಲಿ ಬೆಳ್ಳಿ ಗೆದ್ದ ಸಿಂಧು ಅವರ ಮೂರನೇ ಸಿಂಗಲ್ಸ್ ಪದಕವಾಗಿದೆ.
ಗಾಯ ಮತ್ತು ನೋವು ಕೆನಡಾದ ಮಿಚೆಲ್ ಲಿ ವಿರುದ್ಧದ ಫೈನಲ್ನಲ್ಲಿ ಆಕೆಯ ಅಟಕ್ಕೆ ಅಡ್ಡಿಯಾಗಬಹುದು ಎಂಬ ಆತಂಕವಿತ್ತು.ಆದರೆ ಕೆಲವು ಆರಂಭಿಕ ಮುಗ್ಗರಿಸುವಿಕೆಗಳ ನಂತರ ಸಿಂಧು ಉತ್ತಮ ಫಾರ್ಮ್ ಗೆ ಮರಳಿ ಸ್ವರ್ಣ ಗೆಲ್ಲಲ್ಲು ಬೇಕಿದ್ದ ಎಲ್ಲ ಪಟ್ಟುಗಳನ್ನೂ ಹಾಕಿ ಎದುರಾಳಿಯನ್ನು ಸೋಲಿಸಿದರು.
ಪಿ.ವಿ.ಸಿಂಧು ಅವರ ಗೆಲುವಿಗೆ ಇಡೀ ದೇಶವೇ ಹರ್ಷ ವ್ಯಕ್ತ ಪಡಿಸುತ್ತಿದೆ.