ಡಿ.6 ರಂದು ಪರ್ಯಾಯ ಧಾನ್ಯ ಮುಹೂರ್ತ

ಉಡುಪಿ: ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಶಿಷ್ಯರಾದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರೊಡಗೂಡಿ ನಡೆಸಲಿರುವ ಚತುರ್ಥ ಶ್ರೀಕೃಷ್ಣ ಪೂಜಾ ಪರ್ಯಾಯದ ಚತುರ್ಥ ಮುಹೂರ್ತವಾದ ಧಾನ್ಯ ಮುಹೂರ್ತವು ಶ್ರೀ ಪುತ್ತಿಗೆ ಮಠದಲ್ಲಿ ಡಿ.6 ರಂದು ಬೆಳಗ್ಗೆ 8.20ಕ್ಕೆ ನೆರವೇರಲಿದೆ.

ಬೆಳಗ್ಗೆ 7 ಗಂಟೆಗೆ ಶ್ರೀ ಚಂದ್ರಮೌಳೀಶ್ವರ, ಶ್ರೀ ಅನಂತೇಶ್ವರ ಮತ್ತು ಶ್ರೀಕೃಷ್ಣ ದರ್ಶನದ ಅನಂತರ ವಿವಿಧ ಧಾನ್ಯ ಮುಹೂರ್ತ ನಡೆಯಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.