ನವದೆಹಲಿ: 2019ರ ಫೆಬ್ರುವರಿ 14ರಂದು ಪುಲ್ವಾಮಾ ದಾಳಿಯಲ್ಲಿ 40 ಯೋಧರು ಸಾವಿಗೀಡಾಗಿದ್ದರು. ಈ ದಾಳಿ ನಡೆಸಲು ಸಹಕರಿಸಿದ, ಪಾಕಿಸ್ತಾನದ ಜೈಷ್ ಇ ಮೊಹಮ್ಮದ್ ಸಂಘಟನೆಗೆ ಸೇರಿದ್ದ ಉಗ್ರನೊಬ್ಬನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಶುಕ್ರವಾರ ಬಂಧಿಸಿದೆ.
ಆರೋಪಿಯಾದ ಶಕೀರ್ ಬಷೀರ್ ಮ್ಯಾಗ್ರೆ ನನ್ನು (22) ಬಂಧಿಸ್ಸಿದ್ದು, ಈತ ಪುಲ್ವಾಮಾದ ಕಾಕಾಪೊರಾದಲ್ಲಿನ ಪೀಠೋಪಕರಣಗಳ ವ್ಯಾಪಾರ ನಡೆಸುತ್ತಿದ್ದನು.
ಪುಲ್ವಾಮಾದಲ್ಲಿ ಬಾಂಬ್ ದಾಳಿ ನಡೆಸಿದ್ದ ಅದಿಲ್ ಅಹ್ಮದ್ ದಾರ್ಗೆ ಆಶ್ರಯ ಮತ್ತು ನೆರವು ನೀಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದ ಉಗ್ರ ಮೊಹಮ್ಮದ್ ಉಮರ್ ಫಾರೂಕ್, 2018ರಲ್ಲಿ ಅದಿಲ್ ಅಹ್ಮದ್ ದಾರ್ ನನ್ನು ಶಕೀರ್ ಮ್ಯಾಗ್ರೆಗೆ ಪರಿಚಯಿಸಿದ್ದು, ಮುಂದೆ ಮ್ಯಾಗ್ರೆ ಸಂಪೂರ್ಣವಾಗಿ ಜೆಇಎಂನ ಭೂಗತ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದನು.