ಮಂಗಳೂರು: ತ್ರಿಜಯ್ ಪ್ರೊಡಕ್ಷನ್ ಮತ್ತು ಎಚ್‌ಪಿಆರ್ ಫಿಲಂಸ್ ಬ್ಯಾನರ್ ನಡಿ ತಯಾರಾದ ‘ಪುಳಿಮುಂಚಿ’ ತುಳು ಸಿನೆಮಾ ಅ.27ರಂದು ಕರಾವಳಿಯಾದ್ಯಂತ ತೆರೆಗೆ ಬರಲಿದೆ ಎಂದು ಚಿತ್ರ ನಿರ್ದೇಶಕ ತ್ರಿಶೂಲ್ ಶೆಟ್ಟಿ ತಿಳಿಸಿದ್ದಾರೆ.
ಈಗಾಗಲೇ ದುಬೈ- ಬೆಹರೈನ್ ಸಹಿತ ವಿದೇಶಗಳಲ್ಲಿ ಪುಳಿಮುಂಚಿ ಚಿತ್ರದ ಪ್ರೀಮಿಯರ್ ಶೋ ನಡೆದಿದ್ದು ತುಳುವರು ಚಿತ್ರವನ್ನು ಮೆಚ್ಚಿದ್ದಾರೆ. ಈಗಾಗಲೇ ಬುಕ್ ಮೈ ಶೋನಲ್ಲಿ ಚಿತ್ರದ ಬುಕ್ಕಿಂಗ್ ಆರಂಭಗೊಂಡಿದೆ. ಸಿನಿಮಾಸ್ ಸಹಿತಕರಾವಳಿಯಮಲ್ಟಿಪ್ಲೆಕ್ಸ್, ಸಿಂಗಲ್ ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ತುಳುವರು ಇಷ್ಟ ಪಟ್ಟು ಸಿನಿಮಾ ನೋಡುವ ಮೂಲಕ ತುಳು ಸಿನಿಮಾ ಗೆಲ್ಲಿಸಬೇಕಿದೆ ಎಂದು ಹೇಳಿದ್ದಾರೆ.