ಜಪ್ತಿ ಪಡಿಸಿದ ವಾಹನಗಳ ಬಹಿರಂಗ ಹರಾಜು ಪ್ರಕಟಣೆ

ಉಡುಪಿ : ಉಡುಪಿ ನಗರ ಪೊಲೀಸ್ ಠಾಣೆಗಳ ಆವರಣಗಳಲ್ಲಿ ಜಪ್ತಿಪಡಿಸಿಕೊಂಡು ನಿಲ್ಲಿಸಲಾದ ಕೆ.ಎ 20 ಎಂ.52 ಬಿಳಿ ಬಣ್ಣದ ಪಿಯೆಟ್ ಪದ್ಮಿನಿ ಕಾರು, ಕೆ.ಎ 19 ಏಸ್ 7866 ಯುನಿಕಾರ್ನ್ ಬೈಕ್, ಕೆ.ಎ 09 ಝಡ್ 5252 ಮಾಟಿಜ್ ಕಾರು, ಕೆ.ಎ 13 ಎಮ್ 443 ಮಾರುತಿ ಜೆನ್ ಕಾರು, ಕೆ.ಎ 29 ಕ್ಯೂ 9341 ಬಜಾಜ್ ಎಕ್ಸಿಡ್ ಮೋಟಾರ್ ಸೈಕಲ್, ಕೆ.ಎ 20 5897 ಆಟೋರಿಕ್ಷಾ, ಕೆ.ಎ 19 ಇ.ಬಿ 4096 ಮತ್ತು ಕೆ.ಎ 20 ಕ್ಯೂ 1456 ಮೋಟಾರ್ ಸೈಕಲ್ ವಾಹನಗಳ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥಗೊಂಡರೂ ಅದರ ಮಾಲೀಕರು ವಾಹನವನ್ನು ಬಿಡಿಸಿಕೊಂಡು ಹೋಗಿರುವುದಿಲ್ಲ.

ಆದ್ದರಿಂದ ಪ್ರಕಟಣೆಯ ದಿನಾಂಕದಿಂದ ಒಂದು ವಾರದ ಒಳಗೆ ವಾಹನಗಳ ಮಾಲಕರು ನ್ಯಾಯಾಲಯದಲ್ಲಿ ವ್ಯವಹರಿಸಿ, ತಮ್ಮ ವಾಹನಗಳನ್ನು ಠಾಣೆಯಿಂದ ಬಿಡಿಸಿಕೊಂಡು ಹೋಗಬೇಕು, ತಪ್ಪಿದ್ದಲ್ಲಿ ನ್ಯಾಯಾಲಯದ ಅನುಮತಿ ಪಡೆದು ವಾಹನಗಳನ್ನು ಬಹಿರಂಗ ಹರಾಜು ಮಾಡಲಾಗುವುದು ಎಂದು ಉಡುಪಿ ನಗರ ಪೊಲೀಸ್ ಠಾಣಾ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.