ಬೆಂಗಳೂರು: ಕೊರೊನಾ-ಒಮಿಕ್ರಾನ್ ನಿಯಂತ್ರಿಸುವ ಸಲುವಾಗಿ ರಾಜ್ಯಾದ್ಯಂತ ಎರಡು ವಾರ ವಿಕೇಂಡ್ ಕರ್ಫ್ಯೂ ಹಾಗೂ ನೈಟ್ ಕರ್ಪ್ಯೂ ಮುಂದುವರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ತಜ್ಞರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಜ.7ರ ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ವಿಕೇಂಡ್ ಕರ್ಪ್ಯೂ ಜಾರಿಯಲ್ಲಿ ಇರಲಿದೆ. ಹಾಗೆ ನೈಟ್ ಕರ್ಪ್ಯೂ ಪ್ರತಿ ದಿನ ರಾತ್ರಿ 10ರಿಂದ ಬೆಳಿಗ್ಗೆ 5 ರವರೆಗೆ ಕರ್ಫ್ಯೂ ಜಾರಿಯಲ್ಲಿ ಇರುತ್ತದೆ. ಈ ನಿಯಮ ಮುಂದಿನ ಎರಡು ವಾರ ಜಾರಿಯಲ್ಲಿ ಇರಲಿದೆ.
ಮಾರ್ಗಸೂಚಿಯ ಮುಖ್ಯಾಂಶ ಹೀಗಿದೆ;
ಬೆಂಗಳೂರಿಗೆ ಪ್ರತ್ಯೇಕ, ರಾಜ್ಯಕ್ಕೆ ಪ್ರತ್ಯೇಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುತ್ತದೆ.
ಬೆಂಗಳೂರಿನಲ್ಲಿ 10 ಮತ್ತು 12ನೇ ತರಗತಿ ಹೊರತು ಪಡಿಸಿ ಎಲ್ಲಾ ತರಗತಿಗಳಿಗೆ ಆನ್ ಲೈನ್ ಕ್ಲಾಸ್ಗೆ ಮಾತ್ರ ಅವಕಾಶ ನೀಡಲಾಗಿದೆ. ನಾಳೆ 10 ಗಂಟೆಯಿಂದ ನಿಯಮಗಳು ಜಾರಿ ಆಗಲಿದೆ.
ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಮುಂದಿನ ಎರಡು ವಾರ ಶಾಲೆ, ಕಾಲೇಜುಗಳು ಕ್ಲೋಸ್. 10 ಮತ್ತು 11, 12ನೇ ತರಗತಿ ಹಾಗೂ ಮೆಡಿಕಲ್ ಹಾಗೂ ಪ್ಯಾರಾ ಮೆಡಿಕಲ್ನ ಭೌತಿಕ ತರಗತಿಗಳು ಮಾತ್ರ ನಡೆಯಲಿದೆ.
ರಾಜ್ಯದಲ್ಲಿ ಮುಂದಿನ ಎರಡು ವಾರ ಅಂದರೇ ಜನವರಿ 7ರ ಶುಕ್ರವಾರ ಸಂಜೆಯಿಂದ ವೀಕೆಂಡ್ ಕರ್ಫ್ಯೂ ಜಾರಿ ಆಗಲಿದೆ.. ಎರಡು ವಾರ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಜಾರಿ ಆಗಲಿದೆ.
ಚಿತ್ರ ಮಂದಿರ, ಬಾರ್, ಮಾಲ್, ಪಬ್ಗಳಲ್ಲಿ 50:50 ಜನರಿಗೆ ಅಷ್ಟೇ ಅವಕಾಶ..
ಮದುವೆ ಕಾರ್ಯಕ್ರಮದಲ್ಲಿ ಹೊರಾಂಗಣದಲ್ಲಿ 200 ಜನರಿಗೆ, ಒಳಾಂಗಣದಲ್ಲಿ 100 ಜನರಿಗೆ ಮಾತ್ರ ಅವಕಾಶ
ಬಸ್, ಮೆಟ್ರೋದಲ್ಲಿ ನಿಂತು ಪ್ರಯಾಣ ಮಾಡುವಂತಿಲ್ಲ.. ಬಿಎಂಟಿಸಿ, ಮೆಟ್ರೋ ಪ್ರತ್ಯೇಕ ಮಾರ್ಗಸೂಚಿ ನೀಡುತ್ತೇವೆ.
ರಾಜ್ಯದಲ್ಲಿ ಪ್ರತಿಭಟನೆ ಹಾಗೂ ಜಾತ್ರೆ, ಮೆರವಣಿಗೆ, ಜನಜಂಗುಳಿ ಮಾಡುವಂತಿಲ್ಲ..
ಪ್ರಾರ್ಥನೆ ವೇಳೆ ಶೇ.50 ಜನರಿಗಿಂತ ಹೆಚ್ಚು ಮಂದಿ ಸೇರುವಂತಿಲ್ಲ.
ಹೊರ ರಾಜ್ಯ, ವಿದೇಶಿ ಪ್ರಯಾಣಿಕರಿಗೆ ನೆಗೆಟಿವ್ ವರದಿ ಕಡ್ಡಾಯ.. ಪ್ರಯಾಣಿಕರ ಟ್ರ್ಯಾಕಿಂಗ್, ಟ್ರೆಸಿಂಗ್ ಮಾಡಲಾಗುತ್ತದೆ.