ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶನಾಲಯದ ಆದೇಶದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಸಾಲಿನಲ್ಲಿ ಈ ಹಿಂದೆ ಮುದ್ರಿತವಾಗಿ ಹಾಲಿ ಲಭ್ಯವಿಲ್ಲದಿರುವ ಕೆಲವು ಪ್ರಮುಖ ಕೃತಿಗಳನ್ನು ಮರು ಮುದ್ರಣ ಮಾಡುವ ಯೋಜನೆಯನ್ನು ಸಿದ್ದಪಡಿಸಿದ್ದು, ಅದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.
ಮರು ಮುದ್ರಿಸಬೇಕಾದ ಕೃತಿಗಳ ಸಂಬoಧ ಸಾರ್ವಜನಿಕರಿಂದಲೂ ಕೋರಿಕೆ ಮತ್ತು ಅಭಿಪ್ರಾಯ ಪಡೆಯುವ ನಿಟ್ಟಿನಲ್ಲಿ ಇಲಾಖೆಯ ವೆಬ್ಸೈಟ್: kannadasiri.karnataka.gov.in ನಲ್ಲಿ ಸಾಹಿತ್ಯಾಸಕ್ತರಿಂದ ಅಭಿಪ್ರಾಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.

















