ಪ್ರಚೋದನಕಾರಿ ಭಾಷಣಗಳು ಅಮಾಯಕರ ಕೊಲೆಗೆ ಕಾರಣ: ರಮಾನಾಥ್ ರೈ

ಮಂಗಳೂರು: ಪ್ರಚೋದನಕಾರಿ ಭಾಷಣಗಳಿಂದ ಅಮಾಯಕರ ಕೊಲೆಗಳು ನಡೆದಿವೆ, ಇದರಿಂದ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಪ್ರಚೋದನಕಾರಿ ಭಾಷಣ ಮಾಡಿದವರು ಗಲಭೆಗಳ ಹಿಂದೆ ಇರುತ್ತಾರೆ. ಇಂತಹ ಪ್ರಕರಣ ನಡೆದಾಗ ಅಮಾಯಕರು ಬಲಿಯಾಗುತ್ತಾರೆ. ಹಣ ಹಾಗೂ ಅಧಿಕಾರಕ್ಕಾಗಿ ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಸಾಧ್ಯ.

ಮಸೂದ್ ಮತ್ತು ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ಸರಕಾರ ನಿರ್ಲಕ್ಯ ವಹಿಸಿರುವುದು ಖಂಡನೀಯ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗು ಇಬ್ಬರ ಕುಟುಂಬಕ್ಕೂ ಯಾವುದೇ ತಾರತಮ್ಯ ಮಾಡದೆ ಪರಿಹಾರವನ್ನು ಈ ಕೂಡಲೇ ಸರಕಾರ ಒದಗಿಸಬೇಕು ಎಂದು ಕಾಂಗ್ರೆಸ್ ನ ಮಾಜಿ ಸಚಿವ ರಮಾನಾಥ್ ರೈ ಆಗ್ರಹಿಸಿದ್ದಾರೆ.