ಅಮೃತ್ ಗಾರ್ಡನ್ ನಲ್ಲಿ ಲಯನ್ಸ್ ಕ್ಲಬ್ ಪ್ರಾಂತ್ಯ ಆರರ ಪ್ರಾಂತೀಯ ಸಾಂಸ್ಕೃತಿಕ ಕಾರ್ಯಕ್ರಮ

ಉಡುಪಿ: ಪ್ರಪ್ರಥಮ ಬಾರಿಗೆ ಜಿಲ್ಲೆ 317 ಸಿ ಯಲ್ಲಿ ಪ್ರಾಂತ್ಯ ಆರರ ಪ್ರಾಂತೀಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾಂತ್ಯ ಅಧ್ಯಕ್ಷ ಲಯನ್ ಹರಿಪ್ರಸಾದ್ ರೈ ಅವರ ಮುಂದಾಳತ್ವದಲ್ಲಿ ನೆರವೇರಿತು.

ಪ್ರಾಂತ್ಯದ ಎಲ್ಲಾ ಕ್ಲಬ್ಬುಗಳಿಗೆ ತಮ್ಮ ಪ್ರತಿಭೆಗಳನ್ನು ಪ್ರಸ್ತುತಪಡಿಸಲು ಇದೊಂದು ಒಳ್ಳೆಯ ಅವಕಾಶ, ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಿ ಎಂದು ಜಿಲ್ಲಾ ಪ್ರಥಮ ಉಪಜಿಲ್ಲಾ ಗವರ್ನರ್ ಲಯನ್ ನೇರಿ ಕರ್ನೆಲಿಯೋ ಹೇಳಿದರು.

ಅವರು ಅಮೃತ್ ಗಾರ್ಡನ್ ನಲ್ಲಿ ಸೆ.10 ರಂದು ನಡೆದ ಪ್ರಾಂತ್ಯ ಆರರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಾಂತ್ಯದ ಪ್ರಥಮ ಮಹಿಳೆ ಲಯನ್ ವಿಜೇತಾ ರೈ ದೀಪ ಬೆಳಗಿಸುವರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯಕ್ಷಗಾನ, ನೃತ್ಯ, ಹಾಡು. ರಸಪ್ರಶ್ನೆ. ಹಾಗೂ ವಿವಿಧ
ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು.

ಪ್ರಾಂತ ಅಧ್ಯಕ್ಷರಿಂದ ಬಹುಮಾನ ವಿತರಣೆ ಹಾಗೂ ಕಾರ್ಯಕ್ರಮ ನೆರವೇರಿಸುವಲ್ಲಿ ಸಹಕರಿಸಿದವರನ್ನು ಗುರುತಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಪ್ರಾಂತ್ಯ ಅಧ್ಯಕ್ಷರು, ಎಲ್ಲಾ ಜೊನ್ ಚೇರ್ಮನ್ ಗಳು, ಮಾಜಿ ಜಿಲ್ಲಾ ಗವರ್ನರ್ ಲಯನ್ ವಿಜಿ ಶೆಟ್ಟಿ, ಬೆಂಗಳೂರಿನ ಮೆಗಾ ಸಿಟಿ ಲೈನ್ಸ್ ಕ್ಲಬ್ ಅಧ್ಯಕ್ಷ ಲಯನ್ ಸುಧಾಕರ್ ಶೆಟ್ಟಿ, ಲಯನ್ಸ್ ಕ್ಲಬ್ ಬ್ರಹ್ಮಗಿರಿಯ ಕಾರ್ಯದರ್ಶಿ ಲಯನ್ ಗೀತಾ ವಿ ರಾವ್ ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್ ಬ್ರಹ್ಮಗಿರಿಯ ಅಧ್ಯಕ್ಷ ಉಮೇಶ್ ನಾಯಕ್ ಸ್ವಾಗತಿಸಿದರು. ಪ್ರಾಂತೀಯ ಕಾರ್ಯದರ್ಶಿ ಲಯನ್ ಗಿರೀಶ್ ರಾವ್ ಧನ್ಯವಾದ ಸಮರ್ಪಿಸಿದರು.