ಉಡುಪಿ: ರೈತರು ಬೆಳೆದ ಬೆಲೆಗೆ ನ್ಯಾಯಯುತ ಬೆಲೆ ಸಿಗಲಿ ಎನ್ನುವ ಆಶಯದಿಂದ ಕೃಷಿ ಉತ್ಪನ್ನ ಮಾರುಕಟ್ಟೆಯ ವ್ಯವಸ್ಥೆ ಆದಿ ಉಡುಪಿಯಲ್ಲಿ ಮಾರುಕಟ್ಟೆ ಸಮಿತಿಯ ಮೂಲಕ ಮಾಡಲಾಗಿದ್ದು, ಸಮಿತಿ ರಚನೆ ಆಗದ ಸಂಧರ್ಭವನ್ನು ನೋಡಿ ಕೇವಲ ಅಧಿಕಾರಿಗಳು ಎಪಿಎಂಸಿ ಜಾಗವನ್ನು ಲೀಸ್ ಕಮ್ ಸೇಲ್ ಅಡಿಯಲ್ಲಿ ಅತೀ ಕಡಿಮೆ ದರದಲ್ಲಿ ಲಂಚ ಪಡೆದು ಮಾರಾಟ ಮಾಡಿದ್ದಾರೆ ಎನ್ನುವ ಆರೋಪವನ್ನು ಮಾಡಿರುವ ರೈತರು ಇದರ ವಿರುದ್ದ ಜೂನ್ 28 ರಂದು ಬೆಳಿಗ್ಗೆ 10.30 ಗಂಟೆಗೆ ಪ್ರತಿಭಟನೆ ಸಭೆ ನಡೆಸಲಿದ್ದಾರೆ ಎಂದು ಅಧ್ಯಕ್ಷರ ಪ್ರಕಟಣೆ ತಿಳಿಸಿದೆ.