ದಾವಣಗೆರೆ ಮತ್ತು ದಕ್ಷಿಣ ಕನ್ನಡ ,ಚಿತ್ರದುರ್ಗದಲ್ಲಿದೆ ಪ್ರಾಜೆಕ್ಟ್​​ ಕೋ ಆರ್ಡಿನೇಟರ್​ ಹುದ್ದೆ; ಅರ್ಜಿ ಸಲ್ಲಿಕೆಗೆ ಜು.28 ಕಡೆಯ ದಿನ

 

ಉದ್ಯಮಗಳಿಗೆ ವ್ಯಾಪಾರ ಯೋಜನೆ ರೂಪಿಸುವಿಕೆ, ಧನಸಹಾಯ ರೂಪಿಸುವ ಮತ್ತು ಮೂಲಭೂತ ಸೌಲಭ್ಯ ಸೇರಿದಂತೆ ಆರ್ಥಿಕತೆ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕಾರ್ಯ ನಿರ್ವಹಿಸುವ ಹುದ್ದೆ ಇದಾಗಿದೆ. ಕರ್ನಾಟಕದ ಚಿತ್ರದುರ್ಗ, ದಾವಣಗೆರೆ ಮತ್ತು ದಕ್ಷಿಣ ಕನ್ನಡದಲ್ಲಿ ಈ ಹುದ್ದೆಗಳು ಖಾಲಿ ಇವೆ. ಪದವೀಧರ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಭಾರತದ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆಯ (Entrepreneurship Development Institute of India -EDII) ಕರ್ನಾಟಕ ವಿಭಾಗದಲ್ಲಿ ಖಾಲಿ ಇರುವ ಪ್ರಾಜೆಕ್ಟ್​​​​ ಅಫೀಸರ್​ ಮತ್ತು ಪ್ರಾಜೆಕ್ಟ್​​​ ಕೋ ಆರ್ಡಿನೇಟರ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ.
ಭಾರತದ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆಯಿಂದ ಗುತ್ತಿಗೆ ಆಧಾರದ ಮೇಲೆ ಈ ನೇಮಕಾತಿ ನಡೆಯಲಿದ್ದು, ಈ ಹುದ್ದೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಉದ್ಯಮಗಳಿಗೆ ವ್ಯಾಪಾರ ಯೋಜನೆ ರೂಪಿಸುವಿಕೆ, ಧನಸಹಾಯ ರೂಪಿಸುವ ಮತ್ತು ಮೂಲಭೂತ ಸೌಲಭ್ಯ ಸೇರಿದಂತೆ ಆರ್ಥಿಕತೆ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕಾರ್ಯ ನಿರ್ವಹಿಸುವ ಹುದ್ದೆ ಇದಾಗಿದೆ. ಕರ್ನಾಟಕದ ಚಿತ್ರದುರ್ಗ, ದಾವಣಗೆರೆ ಮತ್ತು ದಕ್ಷಿಣ ಕನ್ನಡದಲ್ಲಿ ಈ ಹುದ್ದೆಗಳು ಖಾಲಿ ಇವೆ. ಪದವೀಧರ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಹುದ್ದೆ ವಿವರ: ಕರ್ನಾಟಕದ ಚಿತ್ರದುರ್ಗ, ದಾವಣಗೆರೆ ಮತ್ತು ದಕ್ಷಿಣ ಕನ್ನಡದಲ್ಲಿ 15 ಪ್ರಾಜೆಕ್ಟ್​​ ಕೋ ಆರ್ಡಿನೇಟರ್​ ಹುದ್ದೆಗಳು ಖಾಲಿ ಇವೆ. ಇನ್ನು ಕಲಬುರಗಿ, ವಿಜಯಪುರ, ಬೆಳಗಾವಿ, ಶಿವಮೊಗ್ಗ, ದಕ್ಷಿಣ ಕನ್ನಡ, ಗದಗ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ತುಮಕೂರಿನಲ್ಲಿ ಒಟ್ಟು 8 ಪ್ರಾಜೆಕ್ಟ್​ ಆಫೀಸರ್​ ಹುದ್ದೆಗಳಿವೆ.

ಅಧಿಸೂಚನೆ
ವಿದ್ಯಾರ್ಹತೆ: ಈ ಹುದ್ದೆಗೆ ಅಭ್ಯರ್ಥಿಗಳು ಎಂಬಿಎ, ರೂರಲ್​ ಮ್ಯಾನೇಜ್​ಮೆಂಟ್​​, ಅರ್ಥಶಾಸ್ತ್ರದಲ್ಲಿ ಪದವಿ ಆಗಿರಬೇಕು.

ಪ್ರಾಜೆಕ್ಟ್​ ಕೋ ಆರ್ಡಿನೇಟರ್​​ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 3 ರಿಂದ 5 ವರ್ಷಗಳ ಕಾಲ ಸಣ್ಣ ವಾಣಿಜ್ಯೋದ್ಯಮ, ಉದ್ಯಮ ಅಭಿವೃದ್ಧಿ, ಸ್ವಯಂ ಉದ್ಯೋಗ ಅಥವಾ ಮಹಿಳಾ ಸಂಬಂಧಿತ ಯೋಜನೆ ಮತ್ತು ಪ್ರಾಜೆಕ್ಟ್​​ನಲ್ಲಿ 3 ರಿಂದ 5 ವರ್ಷ ಕೆಲಸ ಮಾಡಿದ ಅನುಭವ ಇರಬೇಕು. ಜೊತೆಗೆ ಅಭ್ಯರ್ಥಿಗಳು ಸುಲಲಿತವಾಗಿ ಕನ್ನಡ ಮಾತನಾಡುವಂತಿರಬೇಕು. ದಾಖಲಾತಿ ನಮೂದಿಸುವಿಕೆ, ವರದಿ ಕೌಶಲ್ಯ, ಉತ್ತಮ ಅರ್ಥೈಸಿಕೊಳ್ಳುವಿಕೆ, ದತ್ತಾಂಶ ವಿಶ್ಲೇಷಣೆ ಮತ್ತು ಉತ್ತಮ ಸಂವಹನ ಸಾಮರ್ಥ್ಯವನ್ನು ಹೊಂದಿರಬೇಕು.

ಈ ಹುದ್ದೆಗಳನ್ನು ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಸಲಾಗುತ್ತಿದ್ದು, ಪ್ರಾಜೆಕ್ಟ್​​ ಕೋ ಆರ್ಡಿನೇಟರ್​ ಹುದ್ದೆಗೆ ಅಭ್ಯರ್ಥಿಗಳಿಗೆ ಮಾಸಿಕ 30 ಸಾವಿರ ವೇತನ ನಿಗದಿ ಮಾಡಲಾಗಿದೆ. ಪ್ರಾಜೆಕ್ಟ್​ ಆಫೀಸರ್​ ಹುದ್ದೆಗೆ 18 ಸಾವಿರ ರೂ. ವೇತನ ನಿಗದಿಪಡಿಸಲಾಗಿದೆ. ಈ ಹುದ್ದೆಗೆ ಅಭ್ಯರ್ಥಿಗಳು ಇಮೇಲ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 28 ಆಗಿದೆ.

.ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ವೀಕ್ಷಣೆಗೆ ಅಭ್ಯರ್ಥಿಗಳು ಈ ediindia.org ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.ಅರ್ಜಿ ಸಲ್ಲಿಸುವ ಕ್ರಮ: ಅಭ್ಯರ್ಥಿಗಳು ಪ್ರಾಜೆಕ್ಟ್​​ ಕೋಆರ್ಡಿನೇಟರ್ ಅಥವಾ ಪ್ರಾಜೆಕ್ಟ್​ ಆಫೀಸರ್​ ಈ ಹುದ್ದೆಗಳಲ್ಲಿ ಯಾವುದಕ್ಕೆ ಅರ್ಜಿ ಸಲ್ಲಿಸಲಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಇ-ಮೇಲ್​ನ ಸಬ್ಜೆಕ್ಟ್​​ನಲ್ಲಿ ನಮೂದಿಸಬೇಕು. ​ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಅಪ್ಡೇಟ್​ ರೆಸ್ಯೂಮ್​, ಹುದ್ದೆ ಅನುಭವ, ಸೇರಿದಂತೆ ಇನ್ನಿತರ ದಾಖಲಾತಿಗಳನ್ನು jobs.msdp@ediindia.org ಈ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕಕ್ಕೆ ಮುಂಚೆ ಸಲ್ಲಿಸಬೇಕು