ಪ್ರಾಧ್ಯಾಪಕಿ ಪ್ರಮೀಳಾ ಡಿ’ಸೊಜಾ ಇವರಿಗೆ ಪಿ.ಎಚ್.ಡಿ. ಪದವಿ 

ಮಂಗಳೂರು: ಫಾದರ್ ಮುಲ್ಲರ್ ನರ್ಸಿಂಗ್ ಮಹಾವಿದ್ಯಾಲಯದ, ಸ್ತ್ರೀರೋಗ ಮತ್ತು ಹೆರಿಗೆ ಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿರುವ ಪ್ರಮೀಳಾ ಡಿಸೊಜಾ ಇವರು ‘ಇಫೆಕ್ಟಿವ್‌ನೆಸ್ ಒಫ್ ಮಲ್ಟಿ ಮೊಡ್ಯುಲರ್ ಇಂಟರ್ವೆನ್ಶನ್ಸ್ ಒಫ್ ಲೈಫ್‌ಸ್ಟೈಲ್ ಮೋಡಿಫಿಕೇಶನ್ ಒನ್ ಸಿಂಫ್ಟಮ್ಸ್ ಒಫ್ ಪೊಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಆಂಡ್ ಕ್ವಾಲಿಟಿ ಒಫ್ ಎಮಂಗ್ ವಿಮೆನ್ ಇನ್ ಸಿಲೆಕ್ಟೆಡ್ ಹೊಸ್ಪಿಟಲ್ಸ್, ಮಂಗಳೂರು, ಇಂಡಿಯಾ’ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಯೆನೆಪೋಯಾ ಡೀಮ್ಡ್ ಯುವಿವರ್ಸಿಟಿ ಪಿ.ಎಚ್.ಡಿ ಪದವಿ ನೀಡಿದೆ.

ಈ ಮಹಾಪ್ರಬಂದವನ್ನು ಅವರು ಡಾ| ಕೆ. ರಾಜಗೋಪಾಲ್, ಪ್ರಾಧ್ಯಾಪಕರು ಮತ್ತು ವಿಭಾಗ ಮುಖ್ಯಸ್ಥರು, ಯೆನೆಪೊಯಾ ಮೆಡಿಕಲ್ ಕಾಲೇಜು ಆಸ್ಪತ್ರೆ, ಮಂಗಳೂರು ಇವರ ಮಾರ್ಗದರ್ಶನ ಮತ್ತು ಡಾ| ದೇವಿನಾ ರೊಡ್ರಿಗಸ್, ಉಪ ಪ್ರಾಂಶುಪಾಲರು, ಫಾದರ್ ಮುಲ್ಲರ್ ನರ್ಸಿಂಗ್ ಮಹಾವಿದ್ಯಾಲಯ ಇವರ ಸಹ -ಮಾರ್ಗದರ್ಶನದಲ್ಲಿ ಸಿದ್ದಪಡಿಸಿದ್ದರು.

ಡೊ| ಪ್ರಮೀಳಾ ಡಿ’ಸೊಜಾ ಮಂಗಳೂರಿನ ಫಳ್ನೀರ್ ನಿವಾಸಿಯಾಗಿದ್ದು, ಇಂಗ್ಲಿಷ್ ಪ್ರಾಧ್ಯಾಪಕ ರೋಶನ್ ಮಾಡ್ತಾ ಇವರ ಪತ್ನಿಯಾಗಿದ್ದಾರೆ.