ದಾವಣಗೆರೆ: ಶಿಕ್ಷಣ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿರುವ, ಪ್ರಸ್ತುತ ಕೋಟೇಶ್ವರದ ಶ್ರೀ ಕಾಳವರ ವರದರಾಜ ಎಂ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿರ್ವಹಣಾ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಚೇತನಾ ಎಂ. ಅವರಿಗೆ ಜುಲೈ 20 ರಂದು ಪ್ರತಿಷ್ಠಿತ “ವಿದ್ಯಾವರ್ಧಿನಿ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಾವಣಗೆರೆ ಜಿಲ್ಲಾ ಪಂಚಮಸಾಲಿ ಸಮುದಾಯ ಮತ್ತು ಹರ ಸೇವಾ ಸಂಸ್ಥೆ (ರಿ.), ದಾವಣಗೆರೆಯ ಪಂಚಮಸಾಲಿ ಸಮಾಜದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಯವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಡಾ. ಚೇತನಾ ಎಂ. ಅವರ ನಿಸ್ವಾರ್ಥ ಸೇವೆ ಮತ್ತು ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಅವರು ಪ್ರಸ್ತುತ ಕಾಲೇಜಿಗೆ ಬರುವ ಮುನ್ನ, ಬಿ.ಎಸ್. ಚನ್ನಬಸವಪ್ಪ ಕಾಲೇಜಿನಲ್ಲಿಯೂ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿದ್ದರು. ಅವರ ಬೋಧನೆ ಮತ್ತು ಶೈಕ್ಷಣಿಕ ಕೊಡುಗೆಗಳಿಂದ ಅನೇಕ ವಿದ್ಯಾರ್ಥಿಗಳು ಪ್ರೇರಣೆ ಪಡೆದಿದ್ದಾರೆ.
“ವಿದ್ಯಾವರ್ಧಿನಿ” ಎಂಬ ಬಿರುದು ಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅವರ ಶ್ರೇಷ್ಠತೆಯನ್ನು ಸೂಚಿಸುತ್ತದೆ ಎಂದು ಪ್ರಶಂಸಿಸಲಾಯಿತು.ದಾವಣಗೆರೆಯಲ್ಲಿ ನಡೆದ ಈ ಅದ್ಧೂರಿ ಕಾರ್ಯಕ್ರಮಕ್ಕೆ ಹಲವಾರು ಧಾರ್ಮಿಕ ಮುಖಂಡರು ಮತ್ತು ಸಮುದಾಯದ ಗಣ್ಯರು ಸಾಕ್ಷಿಯಾದರು.
ಡಾ. ಚೇತನಾ ಎಂ. ಅವರು ವಿವಾಹದ ನಂತರ , ಎರಡು ಮಕ್ಕಳ ತಾಯಿಯಾದ ನಂತರ ತಮ್ಮ ಶಿಕ್ಷಣವನ್ನು ಮುಂದುವರೆಸಿದರು. Bcom ಪದವಿಯಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕವನ್ನು ಪಡೆದಿರುತ್ತಾರೆ. ನಂತರ MBA ಹಾಗೂ M.Com ಪದವಿಯನ್ನು ಪಡೆದು,K-SET ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲಿಯೇ ಪಾಸಾಗಿರುತ್ತಾರೆ. ಇತ್ತೀಚೆಗೆ Ph. D ಪದವಿಯನ್ನು ಪಡೆದಿರುತ್ತಾರೆ. ಇವರ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಳನ್ನು ಗುರುತಿಸಿ ಅವರಿಗೆ “ವಿದ್ಯಾವರ್ಧಿನಿ” ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು. ಭವಿಷ್ಯದಲ್ಲಿ ಅವರ ಎಲ್ಲ ಪ್ರಯತ್ನಗಳಲ್ಲಿ ನಿರಂತರ ಯಶಸ್ಸನ್ನು ಸಾಧಿಸಲಿ ಎಂದು ಹಾರೈಸಿದರು.
ಈ ಪ್ರಶಸ್ತಿಯು ಡಾ. ಚೇತನಾ ಎಂ. ಅವರಿಗೆ ಮತ್ತಷ್ಟು ಸಾಧನೆಗಳನ್ನು ಮಾಡಲು ಪ್ರೇರಣೆ ನೀಡಲಿದೆ ಎಂದು ಸಭಿಕರು ಅಭಿಪ್ರಾಯಪಟ್ಟರು. ಡಾ. ಚೇತನಾ ಎಂ. ಅವರ ಈ ಗೌರವವು ಸಮುದಾಯದಲ್ಲಿ ಇತರರಿಗೂ ಶಿಕ್ಷಣ ಮತ್ತು ಜ್ಞಾನದ ಮಹತ್ವವನ್ನು ಸಾರಲಿದೆ ಎಂದು ಸಮುದಾಯದ ಮುಖಂಡರು ತಿಳಿಸಿದರು. ಒಟ್ಟಾರೆ, ಈ ಕಾರ್ಯಕ್ರಮವು ಡಾ. ಚೇತನಾ ಎಂ. ಅವರ ಶೈಕ್ಷಣಿಕ ಸಾಧನೆಗಳಿಗೆ ಸಂದ ಗೌರವವಾಗಿತ್ತು.
ಸಹೋದ್ಯೋಗಿಗಳಿಂದ ಹೆಮ್ಮೆ ಮತ್ತು ಶುಭಾಶಯಗಳು:
ಡಾ. ಚೇತನಾ ಎಂ. ಅವರ ಸಾಧನೆಯು ಅಪಾರ ಹೆಮ್ಮೆ ತಂದಿದೆ ಇಂದು ಶ್ರೀ ಕಾಳವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹೋದ್ಯೋಗಿಗಳು ಕಾಲೇಜಿಗೆ, ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆಯ ವಿಷಯ. ಅವರ ಪರಿಶ್ರಮ, ಸಮರ್ಪಣೆ ಮತ್ತು ಜ್ಞಾನದಾಹ ನಿಜಕ್ಕೂ ಪ್ರಶಂಸನೀಯ. ಈ ಪ್ರಶಸ್ತಿಯು ಅವರ ಅಚಲ ಬದ್ಧತೆಗೆ ಸಿಕ್ಕ ಮನ್ನಣೆಯಾಗಿದೆ. ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕರಾದ ಡಾ ಶೇಖರ್ ಬಿ ಅವರು ಹೃತ್ಪೂರ್ವಕ ಅಭಿನಂದನೆ ವ್ಯಕ್ತಪಡಿಸಿದರು ಮತ್ತು ಮುಂದಿನ ಎಲ್ಲಾ ಪ್ರಯತ್ನಗಳಿಗೂ ಬೆಂಬಲವಿದೆ” ಎಂದು ತಿಳಿಸಿದರು.












