ಕಾರಿನಲ್ಲಿ ಎಸಿ ಹಾಕಿ ಮಲಗೋ ಅಭ್ಯಾಸ ನಿಮಗಿದ್ಯಾ?: ಈ ಅಭ್ಯಾಸದಿಂದ ಜೀವಕ್ಕೇ ಆಪತ್ತು!

ಹೌದು ಇತ್ತೀಚೆಗೆ, ನೋಯ್ಡಾದಲ್ಲಿ ಒಂದು ಘಟನೆ ನಡೆಯಿತು, ಕಾರು ಚಾಲಕ ಮತ್ತು ಅವನ ಸ್ನೇಹಿತ ಇಬ್ಬರೂ ಕ್ಯಾಬ್‌ನಲ್ಲಿ ನಿದ್ರಿಸಿದ್ದರು. ಆದರೆ, ಕಾರು ಚಾಲಕ ಎಷ್ಟು ಹೊತ್ತಾದರೂ ಮನೆಗೆ ತಲುಪದಿದ್ದಾಗ, ಯೋಚನೆಗೀಡಾದ ಕುಟುಂಬದ ಸದಸ್ಯರು ಆತನನ್ನು ಹುಡುಕಲು ಪ್ರಾರಂಭಿಸಿದರು. ಕೊನೆಗೆ ಅವರ ಕಾರು ಒಂದು ಕಡೆ ನಿಂತಿರುವುದು ಕಾಣಿಸಿದ್ದು, ಅದರೊಳಗೆ ಆತ ಮತ್ತು ಆತನ ಸ್ನೇಹಿತ, ಇಬ್ಬರು ಮಲಗಿರುವುದು ಕಂಡುಬಂದಿದೆ. ಹೊರಗಿನಿಂದ ಎಷ್ಟು ಕರೆದರೂ ಏಳದಿದ್ದಾಗ, ಕೊನೆಯದಾಗಿ ಕಾರಿನ ಗಾಜು ಒಡೆದಿದ್ದಾರೆ. ಆದರೆ, ಈ ಸಂದರ್ಭ ಇಬ್ಬರೂ ಸಾವನ್ನಪ್ಪಿರುವುದು ಕಂಡುಬಂದಿದೆ. ಪೊಲೀಸರು ಇಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ ನಂತರ ತಿಳಿದ ಸಂಗತಿ ಬೆಚ್ಚಿಬೀಳಿಸುವಂತಿತ್ತು.  ಎಸಿ ಆನ್ ಮಾಡಿದ ನಂತರ ಇಬ್ಬರೂ ನಿದ್ರೆಗೆ ಜಾರಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇಬ್ಬರೂ ಕಾರಿನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಕೊನೆಗೆ ದೃಢಪಡಿಸಿದರು. ಈ ಘಟನೆಯ ಬಳಿಕ ಎಸಿ ಆನ್ ಮಾಡಿ ಕಿಟಕಿ ಬಾಗಿಲುಗಳನ್ನು ಬಂದ್ ಮಾಡಿ ತುಂಬಾ ಹೊತ್ತು ಕಾರಿನಲ್ಲಿ ಮಲಗುದರಿಂದ ಅಪಾಯ ಸಂಭವಿಸುತ್ತ? ಎನ್ನುವ ಪ್ರಶ್ನೆ ಎದ್ದಿದೆ.

ಹೀಗೆ ಮಲಗಿದ್ರೆ ಸಮಸ್ಯೆ ಏನು?

ಸಾಮಾನ್ಯವಾಗಿ ಕಾರಿನ ಎಂಜಿನ್ ಚಾಲನೆಯಲ್ಲಿರುವಾಗ, ಅದರಿಂದ ಇಂಗಾಲದ ಮಾನಾಕ್ಸೈಡ್ ಅನಿಲ ಹೊರಬರುತ್ತೆ. ನಿಷ್ಕಾಸ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆ ಅಥವಾ ಸೋರಿಕೆ ಉಂಟಾದರೆ, ಈ ಅನಿಲವು ಎಸಿ ವೆಂಟ್‌ಗಳ ಮೂಲಕ ಕಾರನ್ನು ಪ್ರವೇಶಿಸಿ ಮಲಗಿರುವ ವ್ಯಕ್ತಿಯ ದೇಹವನ್ನು ಪ್ರವೇಶಿಸುತ್ತದೆ. ಇದು ಕಾರಿನಲ್ಲಿ ಆಮ್ಲಜನಕದ ಪೂರೈಕೆಯನ್ನು ನಿಲ್ಲಿಸುತ್ತದೆ ಮತ್ತು ಉಸಿರುಗಟ್ಟುವಿಕೆಯಿಂದಾಗಿ ಸಾವಿಗೆ ಕಾರಣವಾಗುತ್ತದೆ ಎನ್ನುವ ಮಾಹಿತಿಯೊಂದು ಅಧ್ಯಯನ ಬಿಚ್ಚಿಟ್ಟಿದೆ.

ಎಸಿ ಆನ್ ಆಗಿದ್ದರೆ ಮತ್ತು ಕಾರು ಸಂಪೂರ್ಣವಾಗಿ ಮುಚ್ಚಿದ್ದರೆ, ಒಳಗೆ ಗಾಳಿಯು ಪರಿಚಲನೆಯಾಗುತ್ತದೆ. ಒಳಗಿನಿಂದ ನಾವು ಆಮ್ಲಜನಕವನ್ನು ತೆಗೆದುಕೊಂಡು ಇಂಗಾಲದ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ಕಾರಿನ ಕಿಟಕಿ ಸಂಪೂರ್ಣವಾಗಿ ಮುಚ್ಚಿದ್ದರೆ ಕಾರಿನೊಳಗಿನ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತದೆ. ಇಂಗಾಲದ ಡೈಆಕ್ಸೈಡ್ ಪ್ರಮಾಣವು ಹೆಚ್ಚಾಗುತ್ತದೆ. ಮಲಗಿಯೇ ಇರುವವರಿಗೆ ಇದು ಅರಿವಿಗೆ ಬರುವುದಿಲ್ಲ. ಹೀಗೆ ಮಲಗಿದ್ದಲ್ಲೇ ಸಾವಿಗೆ ಒಳಗಾದ ಉದಾಹರಣೆಗಳು ನಮ್ಮ  ಮುಂದಿದೆ.

ಏನು ಮಾಡಬಹುದು?