ಪತ್ರಕರ್ತ ಸಂಪತ್ ನಾಯಕ್ ವಿರುದ್ದ ಪ್ರಕರಣ ತನಿಖೆಗೆ ‌ತಡೆ: ಕರ್ನಾಟಕ ಉಚ್ಚನ್ಯಾಯಾಲಯದಿಂದ ಆದೇಶ

ಉಡುಪಿ : ದಿ.22.5.2020  ರಂದು ಕೊವಿಡ್ ಸಂಬಂದ ಹಾಗೂ ಉಡುಪಿ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಯಿದ್ದರೂ ಸರಕಾರಿ ಪದವಿ ಪೂರ್ವ ಕಾಲೇಜು ಹೈಸ್ಕೂಲ್ ವಿಭಾಗ ಕಾರ್ಕಳ ಇಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಮುರಳೀಧರ ಪ್ರಭು ವಿಧ್ಯಾರ್ಥಿಗಳನ್ನು ಕರೆಯಿಸಿ ಎಲ್ಲಾ ಸರಕಾರಿ ಆದೇಶಗಳನ್ನು ಉಲ್ಲಂಘಿಸಿ ತರಗತಿಯನ್ನು ನಡೆಸಿದ್ದರು.
ತಾನು ಮಾಡಿದ ತಪ್ಪು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ತನ್ನ ತಪ್ಪನ್ನು ಮರೆಮಾಚಲು ಇದರ ಬಗ್ಗೆ ವಸ್ತು ನಿಷ್ಟ ವರದಿಯನ್ನು ಮಾಡಿದ ಪತ್ರಕರ್ತರಾದ ಸಂಪತ್ ಎಂಬವರ ಮೇಲೆ ದಿ 23-5-2020 ರಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಸುಳ್ಳು ದೂರನ್ನು (ಪ್ರಕರಣ ಸಂಖ್ಯೆ ೪೧/೨೦೨೦) ದಾಖಲಿದ್ದರು. ಈ ಧಾಖಲಿಸಿದ ಸುಳ್ಳು ದೂರನ್ನು ರದ್ದು ಪಡಿಸುವ ಬಗ್ಗೆ ಪತ್ರಕರ್ತರಾದ ಸಂಪತ್ ಇವರು ಎಲ್ಲಾ ದಾಖಲೆ ಸಮೇತ ಹೈಕೋರ್ಟ್ ಬೆಂಗಳೂರು ಇಲ್ಲಿಗೆ ಅರ್ಜಿಯನ್ನು ಸಲ್ಲಿಸಿದರು. ಇದರ ಬಗ್ಗೆ ದಿನಾಂಕ 22-9-2020 ವಿಚಾರಣೆ ನಡೆಸಿದ ಕರ್ನಾಟಕ ಉಚ್ಚ ನ್ಯಾಯಾಲಯವು ನ್ಯಾಯಾಧೀಶರಾದ ಶ್ರೀ ಶ್ರೀನಿವಾಸ ಹರೀಶ್‌ಕುಮಾರ್ ಇವರು ಪ್ರಕರಣಕ್ಕೆ ತಡೆಯಾಜ್ಞೆ ಯನ್ನು ನೀಡಿರುತ್ತಾರೆ. ಹಾಗೂ ಪತ್ರಕರ್ತರಾದ ಸಂಪತ್‌ರವರ ಪರವಾಗಿ ಹೈಕೋರ್ಟ್ ಬೆಂಗಳೂರಿನ ಪ್ರಖ್ಯಾತ ನ್ಯಾಯವಾದಿಗಳಾದ  ಪವನಚಂದ್ರ ಶೆಟ್ಟಿ.ಹೆಚ್ ಇವರು ವಾದವನ್ನು ಮಂಡಿಸಿರುತ್ತಾರೆ.