ವಿಜ್ಞಾನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಉಡುಪಿ, ಮಾ.03: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆ.ಎಸ್.ಸಿ.ಎಸ್.ಟಿ) ಯು ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಆಯೋಜಿಸಲಾಗಿದ್ದ “ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನದ ಉಪಯೋಗ” ಕುರಿತ ಆನ್‌ಲೈನ್ ವೈಜ್ಞಾನಿಕ ಸ್ಪರ್ಧೆಗಳಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಕೋಟತಟ್ಟು ಶಿವರಾಂ ಕಾರಂತ ಥೀಮ್ ಪಾರ್ಕ್ನಲ್ಲಿ ಇತ್ತೀಚೆಗೆ ಜರುಗಿದ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವ ಶ್ರೀನಿವಾಸ ಪೂಜಾರಿ ಅವರು ಬಹುಮಾನ ವಿತರಿಸಿ ಶುಭ ಹಾರೈಸಿದರು. 

ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ ಹಾಗೂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಎನ್.ಆರ್.ಡಿ.ಎಮ್.ಎಸ್ ಕೇಂದ್ರದ ಮೂಲಕ ಸ್ಪರ್ಧೆಗಳ ಸಮನ್ವಯ ಮಾಡಲಾಗಿದ್ದು, ಆರು ವಿದ್ಯಾರ್ಥಿಗಳು ರಾಜ್ಯದಲ್ಲಿ ವಿಜೇತರಾಗಿರುತ್ತಾರೆ.

ಇದರೊಂದಿಗೆ ಶಿಕ್ಷಕರಿಗೆ ಜರುಗಿದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಸೇಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ವಿಜೇತರಾಗಿದ್ದು, ಉಡುಪಿ ಜಿಲ್ಲೆಯು ರಾಜ್ಯ ಹಂತದಲ್ಲಿ ಗರಿಷ್ಠ ಬಹುಮಾನಗಳನ್ನು ಜಯಿಸಿದೆ. 

ರಾಜ್ಯ ಮಟ್ಟದ ಸ್ಪರ್ಧಾ ವಿಜೇತರು: ಸುಹನ್ ಎಸ್ ಶೆಟ್ಟಿ, 9ನೇ ತರಗತಿ, ಲಿಟಲ್ ರಾಕ್, ಇಂಡಿಯನ್ ಸ್ಕೂಲ್, ಬ್ರಹ್ಮಾವರ, ಗೌರಿ ಎಸ್. 9ನೇ ತರಗತಿ, ಸೇಂಟ್ ಸಿಸಿಲಿ ಪ್ರೌಢಶಾಲೆ ಉಡುಪಿ, ವರ್ಚಸ್ವಿ 8ನೇ ತರಗತಿ, ಸರಕಾರಿ ಪ್ರೌಢಶಾಲೆ, ಒಳಕಾಡು, ರಶೀತ ಭಾವಿ, 10 ನೇ ತರಗತಿ ಕಾರ್ಕಳ ಸುಂದರ ಪುರಾಣಿಕ್ ಸ್ಮಾರಕ ಸರಕಾರಿ ಪ್ರೌಢಶಾಲೆ (ಕೆ.ಎಸ್.ಪಿ.ಎಮ್.ಜಿ.ಹೆಚ್) ಪೆರ್ವಾಜೆ, ವೈಷ್ಣವಿ ಶೆಟ್ಟಿ, 10 ನೇ ತರಗತಿ, ಸರಕಾರಿ ಪ್ರೌಢಶಾಲೆ, ಸಿದ್ಧಾಪುರ ಹಾಗೂ ಕೆ. ಪ್ರತಿಷ್ಠಾ ಶೇಟ್, 8ನೇ ತರಗತಿ, ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ.

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ವಿಜೇತರು (ಶಿಕ್ಷಕರ ವಿಭಾಗ): ಶಿಲ್ಪಾ ಜೆ.ಕಾಂಚನ್, ಸೇಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಉಡುಪಿ

ಜಿಲ್ಲಾ ಮಟ್ಟದ ಪ್ರಶಸ್ತಿ ವಿಜೇತರು: ಗೌರಿ ಎಸ್, 9ನೇ ತರಗತಿ, ಸೇಂಟ್ ಸಿಸಿಲಿ ಪ್ರೌಢಶಾಲೆ, ಉಡುಪಿ, ಜೆ. ನವ್ಯ ಸಿ ಶೆಟ್ಟಿ, 9ನೇ ತರಗತಿ, ಸರಕಾರಿ ಪ್ರೌಢಶಾಲೆ, ಬಸ್ರೂರು, ರಶ್ಮಿತಾ ರವಿರಾಜ್ ನಾಯಕ್, 10 ನೇ ತರಗತಿ, ಸರಕಾರಿ ಜೂನಿಯರ್ ಕಾಲೇಜು, ಬೈಲೂರ್, ಕಾರ್ಕಳ, ರಶ್ಮಿತಾ ರಮೇಶ್ ಶೆಟ್ಟಿ, 10 ನೇ ತರಗತಿ, ಸರಕಾರಿ ಜೂನಿಯರ್ ಕಾಲೇಜು, ಬೈಲೂರ್, ಕಾರ್ಕಳ, ಮೊಹಮ್ಮದ್ ರಮೀಜ್, 9 ನೇ ತರಗತಿ, ಸೇಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ (ಇ.ಎಮ್.ಹೆಚ್.ಎಸ್), ಮೂಡುಬೆಳ್ಳೆ, ಶ್ರೀ ರಕ್ಷಾ ಹೆಗ್ಡೆ, 8 ನೇ ತರಗತಿ, ಮಣಿಪಾಲ ಪಿಯು ಕಾಲೇಜು, ಮಣಿಪಾಲ, ನಿರಂಜನ್ ರಾವ್, 8ನೇ ತರಗತಿ, ಎಸ್.ವಿ.ಟಿ ಆಂಗ್ಲ ಮಾಧ್ಯಮ ಶಾಲೆ, ಕಾರ್ಕಳ, ದಿಶಾ ಶೆಟ್ಟಿ, 10ನೇ ತರಗತಿ, ಮಣಿಪಾಲ ಪಿಯು ಕಾಲೇಜು, ಮಣಿಪಾಲ.