ಉಡುಪಿ: ಕರಾವಳಿಯ ಅಚ್ಚುಮೆಚ್ಚಿನ ಮತ್ತು ವಿಶ್ವಾಸಾರ್ಹ ಜ್ಯುವೆಲ್ಲರ್ಸ್ ಗಳಾದ ಭೀಮಾ ಜ್ಯುವೆಲ್ಲರ್ಸ್ ಪ್ರಾಯೋಜಕತ್ವದಲ್ಲಿ ವಸ್ತುನಿಷ್ಠ ವರದಿಗಾರಿಕೆಗೆ ಹೆಸರುವಾಸಿಯಾಗಿರುವ ಉಡುಪಿ ಎಕ್ಸ್ಪ್ರೆಸ್ ಡಿಜಿಟಲ್ ಮಾಧ್ಯಮವು ಕಳೆದ ವರ್ಷ ನ.14-ಮಕ್ಕಳ ದಿನಾಚರಣೆಯಂದು ವಿನೂತನ ಫೋಟೋ ಕಾಂಟೆಸ್ಟ್ ಅಮ್ಮ ವಿಥ್ ಕಂದಮ್ಮ ಸೀಸನ್-3 ಅನ್ನು ಆಯೋಜಿಸಿದ್ದು, ಫೇಸ್ ಬುಕ್ ನಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ಮೂರು ಫೋಟೋ ಮತ್ತು ತೀರ್ಪುಗಾರರ ಮೆಚ್ಚುಗೆ ಪಡೆದ ಮೂರು ಫೋಟೋಗಳಿಗೆ ಬಹುಮಾನವನ್ನು ಘೋಷಿಸಿತ್ತು. ಒಟ್ಟು ಆರು ಅಮ್ಮ ಮತ್ತು ಕಂದಮ್ಮ ಜೋಡಿಗಳಿಗೆ ಬಹುಮಾನ ವಿತರಣೆ ಸಮಾರಂಭವನ್ನು ಗಣರಾಜ್ಯೋತ್ಸವ ದಿನಾಚರಣೆಯಂದು ನಗರದ ಭೀಮಾ ಜ್ಯುವೆಲ್ಲರ್ಸ್ ಸಂಸ್ಥೆಯಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭೀಮಾ ಜ್ಯುವೆಲ್ಲರ್ಸ್ ನ ಬ್ರ್ಯಾಂಚ್ ಮ್ಯಾನೇಜರ್ ಅಶ್ವಜಿತ್ ಎಂ, ಉಡುಪಿಯ ಚಿಪ್ಸಿ ಐಟಿ ಸರ್ವಿಸಸ್ ಪ್ರೈ.ಲಿ ನ ಸಿ.ಇ.ಒ ಶಾಂಭವಿ ಭಂಡಾರ್ಕರ್ ಮತ್ತು ಭೀಮಾ ಜ್ಯುವೆಲ್ಲರ್ಸ್ ನ ಅಸೋಸಿಯೇಟ್ ಮ್ಯಾನೇಜರ್ ಆಶೀಶ್, ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.
ಉಡುಪಿ ಎಕ್ಸ್ಪ್ರೆಸ್ ಮಾಧ್ಯಮದ ಸ್ವರೂಪ್ ಹಾಗೂ ಅಶೋಕ್ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಶರೋನ್ ಶೆಟ್ಟಿ ಐಕಳ ನಿರೂಪಿಸಿದರು.
ಈ ಸ್ಪರ್ಧೆಯ ಸಹ ಪ್ರಾಯೋಜಕರಾಗಿ ಹೀರೋ ಶಕ್ತಿ ಮೋಟಾರ್ಸ್ ಉಡುಪಿ, ಕಿಡ್ ಜೋನ್ ಕುಂಜಿಬೆಟ್ಟು, ಬ್ರೌನ್ ವುಡ್ ಫರ್ನಿಚರ್ಸ್, ಅಂಬಲಪಾಡಿ, ಪ್ಲೇ ಜೋನ್ ಉಡುಪಿ, ಆಯುರ್ವೇದ ಸಂಸ್ಥೆ ನೋಫ್ ಹಾಗೂ ಶಿವ ಸ್ಮರಣಿಕಾ ಎಂಡ್ ಗಿಫ್ಟ್ಸ್ ಕಾರ್ಕಳ ಇವರು ಸಹಕರಿಸಿದರು.