ಪ್ರಧಾನಿ ಮೋದಿಯ ಹುಟ್ಟುಹಬ್ಬ: ಕೊಡವೂರು ವಾರ್ಡ್ ನಲ್ಲಿ 15 ದಿನಗಳ ಸೇವಾ ಕಾರ್ಯ

ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ನಿಮಿತ್ತ ಕೊಡವೂರು ವಾರ್ಡ್ ನಲ್ಲಿ ನಡೆಯುವ ಸತತ 15 ದಿನಗಳ ಸೇವಾ ಕಾರ್ಯದಲ್ಲಿ ರಿಕ್ಷಾ ಚಾಲಕ ಮಾಲೀಕರ ಸಮಸ್ಯೆಯನ್ನು ತಿಳಿದುಕೊಳ್ಳುವ ದೃಷ್ಟಿಯಿಂದ ಬೈಟೆಕ್ ನಡೆಯಿತು.

ರಿಕ್ಷಾ ಚಾಲಕ ಮಾಲೀಕರ ಸಮಸ್ಯೆಯನ್ನು ಮೆಲುಕು ಹಾಕುವ ಪ್ರಯತ್ನ ನಡೆಯಿತು. ಪರವೂರಿನಿಂದ ಯಾರಾದರೂ ಸಂಶಯಾಸ್ಪದ ವ್ಯಕ್ತಿಗಳು ಬಂದರೆ ಸಂಬಂಧಪಟ್ಟವರಿಗೆ ತಿಳಿಸುವ ಮತ್ತು ರಸ್ತೆಯಲ್ಲಿ ಸಾಕುಪ್ರಾಣಿ ಅಥವಾ ಯಾವುದೇ ಪ್ರಾಣಿಯು ಸತ್ತುಹೋಗಿದ್ದಾರೆ ಅದನ್ನು ತಿಳಿಸುವ ಪ್ರಯತ್ನ ಹಾಗೂ ಕೊಡವೂರು ಪೇಟೆಯನ್ನು ಸ್ವಚ್ಛ ಸುಂದರವಾಗಿರಲು ಮತ್ತು ತಮ್ಮ ನಿಲ್ದಾಣಗಳಲ್ಲಿ ಗಾರ್ಡನಿಂಗ್, ಸುತ್ತಲೂ ಗಿಡದ ವ್ಯವಸ್ಥೆ ಹೀಗೆ ಕೊಡವೂರು ರಿಕ್ಷಾ ನಿಲ್ದಾಣವನ್ನೂ ಸುಂದರ ಕಾಣುವಂತೆ ಮಾಡುವುದು
ಮತ್ತು ಕೊಡವೂರು ಪರಿಸರದಲ್ಲಿ ಕೆಲವೊಂದು ಪರಿಸರದಲ್ಲಿ ರಸ್ತೆಗಳು ಗುಂಡಿ ಬಿದ್ದಿರುವುದು, ಹಲವಾರು ಇಕ್ಕಟ್ಟಿನ ಸ್ಥಳಗಳಲ್ಲಿ ಕನ್ನಡಿಯನ್ನು ನಿರ್ಮಿಸಬೇಕು ಮತ್ತು ರಸ್ತೆಗೆ ಹೆಸರು, ಹೀಗೆ ಹಲವಾರು ತಮ್ಮ ಸಮಸ್ಯೆಗಳನ್ನು ರಿಕ್ಷಾ ಚಾಲಕ ಮತ್ತು ಮಾಲಕರು ನಗರಸಭಾ ಸದಸ್ಯರಾದ ವಿಜಯ್ ಕೊಡುವವರ ಮುಂದೆ ತಮ್ಮ ಅನಿಸಿಕೆಯನ್ನು ತಿಳಿಸಿದರು.

ವಿಜಯ ಕೊಡುವವರು ಮಾತನಾಡಿ, ಆಟೊ- ಚಾಲಕರ ಸಮಸ್ಯೆಗಳನ್ನು ಪ್ರತಿ ತಿಂಗಳಿಗೊಮ್ಮೆ ಕೇಳಿಕೊಂಡು ಅದನ್ನು ಸರಿಪಡಿಸುವ ಪ್ರಯತ್ನವನ್ನು ಮಾಡುತ್ತೇನೆ. ಸಮಾಜದ ಸಮಸ್ಯೆಗಳಿಗೆ ಉತ್ತರ ನೀಡುವಂತಾಗಬೇಕು ಮತ್ತು ಸಮಾಜ ಜಾಗೃತಿ ಮೂಡಿಸುವ ಕಾರ್ಯಕ್ರಮ ನಿಮ್ಮಿಂದ ಆಗಬೇಕು ಎಂದು ವಿಜಯ ಕೊಡುವವರು ತಿಳಿಸಿದರು.
ಈ ಸಂದರ್ಭದಲ್ಲಿ ಕೊಡವರು ರಿಕ್ಷಾ ನಿಲ್ದಾಣದ ಅಧ್ಯಕ್ಷರಾದ ಕೇಶವ್ ಕೊಡವೂರು, ಲಕ್ಷ್ಮೀ ನಗರದ ರಿಕ್ಷಾ ನಿಲ್ದಾಣದ ಅಧ್ಯಕ್ಷರಾದ ನಾಗರಾಜ್ ಇನ್ನಿತರರು ಉಪಸ್ಥಿತರಿದ್ದರು.