ಮಂಗಳೂರು: ಶಿವಮೊಗ್ಗಾ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅತೀ ವಂದನೀಯ ಫ್ರಾನ್ಸಿಸ್ ಸೆರಾವೊ ಇವರು ಮಂಗಳೂರಿನ ಫಾತಿಮಾ ಧ್ಯಾನ ಮಂದಿರದಲ್ಲಿ ಕರ್ನಾಟಕ ಜೆಸ್ವಿಟ್ ಪ್ರಾಂತ್ಯದ ಆರು ಉಪಯಾಜಕರಿಗೆ ಯಾಜಕ ದೀಕ್ಷೆ ನೀಡಿದರು.
ಯಾಜಕ ದೀಕ್ಷೆಯನ್ನು ಪಡೆದ ನವಯಾಜಕರು: ಆಶ್ವಿನ್ ಡಿ’ಸಿಲ್ವಾ ಮೂಡಬಿದ್ರೆಯ ಸಂಪಿಗೆ, ವಿಶಾಲ್ ಪಿಂಟೋ ಕಿನ್ನಿಗೋಳಿ, ಜೈಸನ್ ಲೋಬೊ ಸಿದ್ದಕಟ್ಟೆ, ವಿನೋದ್ ಸಲ್ಡಾನ್ಹಾ ವಿರಾಜ್ಪೇಟೆ, ಆರ್ವಿನ್ ಪಾಯ್ಸ್ ಮಡಂತ್ಯಾರು ಮತ್ತು ಲೆಸ್ಟನ್ ಲೋಬೊ ಮೂಡುಬೆಳ್ಳೆ.
ಕರ್ನಾಟಕ ಜೆಸ್ವಿಟ್ ಪ್ರಾಂತ್ಯದ ಪ್ರಾಂತ್ಯಾಧಿಕಾರಿಗಳಾದ ಫಾ. ಡಯನೀಶಿಯಸ್ ವಾಸ್, ಫಾತಿಮಾ ಧ್ಯಾನ ಮಂದಿರದ ಮುಖ್ಯಗುರುಗಳಾದ ಫಾ.ಅನಿಲ್ ಡಿ’ಮೆಲ್ಲೊ ಹಾಗೂ ನೂರಕ್ಕೂ ಹೆಚ್ಚು ಗುರುಗಳು ಹಾಜರಿದ್ದರು.
ಫಾ. ವಿಲಿಯಂ ಮಾರ್ಸೆಲ್ ಬಲಿಪೂಜೆಯ ನಿರ್ವಹಣೆಯನ್ನು ಹಾಗೂ ಫಾ.ಆನುಶ್ ಡಿ’ಕುನ್ಹಾ ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ನೋಡಿಕೊಂಡರು.