ಕಾರ್ಕಳ: ವಿವಿಧೆಡೆ ನಡೆಯುತ್ತಿರುವ ಮತಾಂತರ ವಿರೋಧಿಸಿ ಸಂಘಟನೆ ತೀವ್ರ ಹೋರಾಟಕ್ಕೆ ಸಜ್ಜಾಗಿದ್ದು, ಸಪ್ಪೆಂಬರ್ 29ರಂದು ಬೆಳ್ಮಣ್ ಚಲೋ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಸುರಕ್ಷ ವಿಭಾಗ ಪ್ರಮುಖ ಮಹೇಶ್ ಬೈಲೂರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಪ್ರತಿಭಟನಾ ಸಭೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವ ಸಂಘದ ಪ್ರಮುಖರಾದ ಕಲ್ಲಡ್ಕ ಡಾ. ಪ್ರಭಾಕರ ಭಟ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಅದರ ಕಾವು ಎಲ್ಲೆಡೆಯಲ್ಲಿ ಕಂಡುಬರಲಿದೆ. ಸಂಘ ಪರಿವಾರದ ಪ್ರಮುಖ ಸೂರ್ಯನಾರಾಯಣ ಅವರ ನೇತೃತ್ವದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮತಾಂತರ ವಿರುದ್ಧ ಜನಜಾಗೃತಿ ನಡೆಸುತ್ತಿರುವ ಭಾಗವಾಗಿ ಹೋರಾಟ ನಡೆಸಲಾಗುತ್ತಿದೆ ಸಂಘದ ಪರಿವಾರದ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವುದರಿಂದ ಮತಾಂತರ ನಿಷೇಧ ಕಾಯಿದೆ ಜಾರಿಗೆ ತರುವುದಕ್ಕೆ ಅನುಕೂಲವಾಗಿದೆ ಎಂದರು.
ಗೋಷ್ಠಿಯಲ್ಲಿ ಪ್ರಮುಖರಾದ ಉಮೇಶ್ ಸೂಡ, ಗುರುಪ್ರಸಾದ್ ನಾರಾವಿ, ರಾಘವೇಂದ್ರ, ಅನಿಲ್ ನಿಟ್ಟೆ, ಪ್ರಸಾದ್ ಶೆಟ್ಟಿ ಬೆಳ್ಮಣ್ ಮತ್ತಿತರರು ಉಪಸ್ಥಿತರಿದ್ದರು.