ಕಾರ್ಕಳ: ಇಲ್ಲಿ ನಿರ್ಮಾಣವಾಗುತ್ತಿರುವ ಪರಶುರಾಮ ಥೀಮ್ ಪಾರ್ಕ್ ಲೋಕಾರ್ಪಣೆ ಕುರಿತ ಪೂರ್ವಾಭಾವಿ ಸಭೆ ಸೋಮವಾರದಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ನೇತೃತ್ವದಲ್ಲಿ ಜನಸೇವಾ ಕಚೇರಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸುನಿಲ್ ಕುಮಾರ್ ಜ. 27 ರಿಂದ 30 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಕಳ ಉತ್ಸವಕ್ಕೆ ಸಹಕರಿಸಿದ ರೀತಿಯಲ್ಲಿ ಸಹಕರಿಸಬೇಕು ಎಂದರು.
ಪ್ರತಿ ಗ್ರಾ.ಪಂ ನಲ್ಲೂ ಪೂರ್ವಸಿದ್ದತೆ ಬಗ್ಗೆ ಮಾಹಿತಿ ನೀಡಿದ ಅವರು ಜ.18 ರಂದು 10 ಗಂಟೆಗೆ ಥೀಮ್ ಪಾರ್ಕಿನ ಕೆಳಭಾಗದಲ್ಲಿರುವ ಕಾರ್ಯಾಲಯದ ಉದ್ಘಾಟನೆ ಮತ್ತು ಜ.30 ರಂದು ಮೈಸೂರು ದಸರಾ ರೀತಿಯಲ್ಲಿ ಪಂಜಿನ ಕವಾಯತು ನಡೆಯಲಿದೆ ಎಂದರು.
ಜ.21 ಮತ್ತು 22 ರಂದು ತಾಲೂಕಿನಾದ್ಯಂತ ಮನೆ ಮನೆಗೆ ತೆರಳಿ ಆಹ್ವಾನ ಪತ್ರಿಕೆ ನೀಡುವ ಬಗ್ಗೆ ತಿಳಿಸಿದರು.
ಜ.27 ರಂದು ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮವು ಜರುಗಲಿದ್ದು, 28 ರಂದು ಸಂಜೆ 3 ಗಂಟೆಗೆ 250 ಕ್ಕೂ ಅಧಿಕ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.