ಪ್ರೀತಿಯ ಅಲೆಗಳು ಹಗುರನೇ ಮೈ ಸೋಕಿದಾಗ: ಪ್ರೀತಿ ಟಿ ಬರೆದ ಒಲವಿನ ಬರಹ

ಮಧ್ಯಾಹ್ನ ಗೆಳತಿಯರೊಂದಿಗೆ  ಪಿ.ಜಿ ಯಿಂದ ತಿರುಗಾಡಲು ಹೊರಟೆ. ಸ್ವಲ್ಪ ದೂರ ಹೋದ ನಂತರ ಪರಿಚಯವಿಲ್ಲದ ಹುಡುಗನ್ನೊಬ್ಬ ನನ್ನ ಮುಂದೆ ಹಾದು ಹೋದ. ಆದರೆ ಆತನನ್ನು ನೋಡಿದ್ದೇ, ಈತ ನನಗೆ ಪರಿಚಯದವನಲ್ವಾ? ಎನ್ನುವ ಭಾವ ನನ್ನಲ್ಲಿ ಮೂಡಿ ಬಿಟ್ಟಿತು. ನಾನು ಆತನನ್ನು ತಿರುಗಿ ತಿರುಗಿ ನೋಡಲಾರಂಭಿಸಿದೆ. ಆತನು  ಕೂಡ ಪರಿಚಯವಿರುವಂತೆ ನೋಡುತ್ತಿದ್ದ. ನಂತರ ಕೆಲವೇ ಕ್ಷಣಗಳಲ್ಲಿ ಬೈಕ್  ಕಾರ್ ಮಧ್ಯದಲ್ಲಿ ಆತ  ಎಲ್ಲಿ ಮರೆಯಾದ ಎಂದು ನನಗೆ  ತಿಳಿಯಲಿಲ್ಲ ,ಆದರೂ ನನ್ನ ಮನಸು  ಆತನನ್ನು  ಹುಡುಕುತ್ತಲೇ ಇತ್ತು. ಈ ಊರಿನಲ್ಲಿ  ನನಗೆ  ಪರಿಚಯ ಎನ್ನುವವರು ಯಾರೂ ಇರಲಿಲ್ಲ. ಏಕೆಂದರೆ ನಾನು ಪದವಿ ವಿದ್ಯಾಭ್ಯಾಸ ಮುಗಿಸಲು ಈ ಊರಿಗೆ ಬಂದಿದ್ದೆ. ಮಾರನೆಯ ದಿನ ಆತನ  ಯೋಚನೆ ಬಿಟ್ಟು  ಕಾಲೇಜಿಗೆ ತಡವಾಯಿತು ಎಂಬ ತರಾತುರಿಯಲ್ಲಿ ಕಾಲೇಜಿಗೆ ಹೊರಟೆ . ನಂತರ ನಾನು ನನ್ನ ಗೆಳತಿ  ಕಾಲೇಜ್ ಗೆ ತಲುಪಿದೆವು.  ಕ್ಲಾಸ್ ರೂಮ್  ತಲುಪುವಾಗ ನೋಡುತ್ತೇನೆ. ಆ ದಿನ ಕಂಡ ಆ ಹುಡುಗ, ನನ್ನ ಕ್ಲಾಸ್ ನ ಮುಂದೆಯೇ ನಿಂತಿದ್ದ. ಆತ ನನ್ನದೆ ಕಾಲೇಜ್ನ ಸೀನಿಯರ್ ಎಂದು ತಿಳಿಯಿತು . ಆತನ ಹೆಸರು ತಿಳಿಯಲು ಒಂದು ವಾರ ಹಿಡಿಯಿತು. ಆತನನ್ನು ನೋಡಲೆಂದೆ  ಮತ್ತೆ ಮತ್ತೆ  ಕ್ಲಾಸ್ ನಿಂದ ಹೊರ ಹೋಗಲಾರಂಭಿಸಿದೆ. ಹಾಗೂ ಹೀಗೂ ಕೊನೆಗೆ ಆತ ನನ್ನೊಂದಿಗೆ ಮಾತನಾಡಿದ.
ಅವನು ನಾಚಿಕೆ ಸ್ವಭಾವದವನು ಎಂದು ನಂತರ ನಮ್ಮಿಬ್ಬರ  ನಡುವೆ ಉತ್ತಮ ಸ್ನೇಹ ಬೆಳೆಯಿತು . ದಿನ ಉರುಳಿದಂತೆ ಆತ ನನಗೆ ತುಂಬಾ ಹತ್ತಿರವಾಗಿದ್ದ .  ಮೊಬೈಲ್‌ ಗೆಳೆಯನೂ ಆದ.ಆದರೆ  ಆತನಾಗಲಿ ನಾನಾಗಲೀ ಮುಂದೆ  ನಿಂತು ಮಾತನಾಡುತ್ತಿರಲಿಲ್ಲ . ನಮ್ಮಿಬ್ಬರ ಕೋಪ ಜಗಳವನ್ನು ಕಮ್ಮಿ ಮಾಡುತ್ತಿದ್ದದ್ದು  ವಾಟ್ಸಪ್ ಸ್ಟೇಟಸ್ . ಇಬ್ಬರು ಜಗಳ ಮಾಡಿಕೊಂಡರೆ  ಕಾಲ್ ಮೆಸೇಜ್ ಮಾಡದೆ ವಾಟ್ಸ್ ಆಪ್ ಸ್ಟೇಟಸ್ ಮೂಲಕ  ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದೆವು. ನಂತರ ಆತನನ್ನು ಕಂಡರೆ ನನ್ನ ಗೆಳತಿಯರು  ನಿನ್ನ ವಾಟ್ಸ್ ಆಪ್ ಗೆಳೆಯ  ಎಂದು ರೇಗಿಸುತ್ತಿದ್ದರು . ಅದೇ ಕೋಪ ಜಗಳಗಳು ನಮ್ಮಿಬ್ಬರ   ಪ್ರೀತಿಯನ್ನು ಚಿಗುರೊಡೆಸಿತು . ಸ್ನೇಹಿತರಾದ  ಕೊನೆಗೆ ನಾವು ಪ್ರೇಮಿಗಳಾದೆವು.ಈಗಲೂ ಪ್ರೀತಿ ನಮ್ಮನ್ನು ಸಲಹುತ್ತಿದೆ.
 
ಪ್ರೀತಿ‌ ಟಿ.