ಉಡುಪಿ: ಪೂರ್ವ ಸ್ವಾಮ್ಯದ ವಾಹನಗಳ ವಿತರಕರ ಸಂಘದ ವತಿಯಿಂದ ಕೃಷ್ಣಾನುಗ್ರಹ ಅರ್ಹ ಸಂಸ್ಥೆ ಹಾಗೂ ದತ್ತು ಕೇಂದ್ರದಲ್ಲಿ ಮಕ್ಕಳ ಜೊತೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಸಂಘದ ವತಿಯಿಂದ ಮಕ್ಕಳಿಗೆ ಹಾಲಿನ ಹುಡಿ, ಹಾಸಿಗೆ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪೂರ್ವ ಸ್ವಾಮ್ಯದ ವಾಹನಗಳ ವಿತರಕರ ಸಂಘದ ಅಧ್ಯಕ್ಷ, ಉಡುಪಿ ಕಾರ್ಸ್ ಮಾಲಕ ಮೊಹಮ್ಮದ್ ಅಶ್ರಪ್, ಕೃಷ್ಣಾನುಗ್ರಹ ಅನಾಥಾಲಯದ ಅಧ್ಯಕ್ಷ ಡಾ. ಉಮೇಶ್ ಪ್ರಭು, ಸಂಘದ ಕಾರ್ಯದರ್ಶಿ, ಸಮಿತಿ ಸದಸ್ಯರು ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.