ಶ್ರೀ ರಾಮಚಂದ್ರ ದಿಗ್ವಿಜಯ ಯಾತ್ರೆ: ಪೂರ್ವಭಾವಿ ಸಭೆ 

 

ಕೊಡವೂರು:   ನವಂಬರ್ 7 ರಂದು ಅಯೋಧ್ಯ ಪ್ರಭು ಶ್ರೀ ರಾಮಚಂದ್ರ ದೇವರ ದಿಗ್ವಿಜಯ ರಥಯಾತ್ರೆಯನ್ನು ಉಡುಪಿ ಜಿಲ್ಲೆಗೆ ಸ್ವಾಗತಿಸುವ ನಿಟ್ಟಿನಲ್ಲಿ   ಭಾನುವಾರ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಈ ಸಂದರ್ಬದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷರಾದ ಆನಂದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿಜಯ್ ಕೊಡವೂರು, ಸಂಘಟನಾ ಕಾರ್ಯದರ್ಶಿ ರಾಧಾಕೃಷ್ಣ ಮೆಂಡನ್, ಅಯೋಧ್ಯ ಕರಸೇವಯಲ್ಲಿ ಭಾಗವಹಿಸಿದ ವಿನಾಯಕ್ ರಾವ್ ಕನ್ಯಾಡಿ, ಜಯಂತ್ ಪಡುಕೆರೆ ಮತ್ತಿತರರು ಉಪಸ್ಥಿತರಿದ್ದರು