ಪ್ರಸಾರ ಭಾರತಿ ಹುದ್ಧೆಗಳಿಗೆ ಅರ್ಜಿ ಆಹ್ವಾನ: ಕೂಡಲೇ ಅರ್ಜಿ ಸಲ್ಲಿಸಿ

ಪ್ರಸಾರ ಭಾರತಿ: ಪ್ರಸಾರ ಭಾರತಿಯ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಂಪನ್ಮೂಲ ವ್ಯಕ್ತಿ ​, ವಿಡಿಯೋ ಪರ್ಸನ್​, ವಿಡಿಯೋ ಅಸಿಸ್ಟೆಂಟ್, ಪೋಸ್ಟ್​ ಪ್ರೊಡಕ್ಷನ್​ ಅಸಿಸ್ಟೆಂಟ್, ಜನರಲ್ ಅಸಿಸ್ಟೆಂಟ್ ಹಾಗೂ ಇತರೆ ಹುದ್ದೆಗಳಿಗೆ  ಆಹ್ವಾನಿಸಿಲಾಗಿದೆ. ಆಸಕ್ತ ಅಭ್ಯರ್ಥಿಗಳು  ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ  prasarbharati.gov.in  ಗೆ ಭೇಟಿ ನೀಡಬಹುದು. ಜನವರಿ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಹುದ್ದೆಯ ಮಾಹಿತಿ:ಸಂಪನ್ಮೂಲ ವ್ಯಕ್ತಿ, ವಿಡಿಯೋ ಪರ್ಸನ್​, ವಿಡಿಯೋ ಅಸಿಸ್ಟೆಂಟ್​, ಪೋಸ್ಟ್​​ ಪ್ರೊಡಕ್ಷನ್​ ಅಸಿಸ್ಟೆಂಟ್​​,ಜನರಲ್ ಅಸಿಸ್ಟೆಂಟ್

ವಿದ್ಯಾರ್ಹತೆ:

ಸಂಪನ್ಮೂಲ ವ್ಯಕ್ತಿ​: ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ ಪಡೆದಿರಬೇಕು. ಅಥವಾ ಪತ್ರಿಕೋದ್ಯಮ ಮತ್ತು ಸಮೂಹ, ಟಿವಿ ಮತ್ತು ರೇಡಿಯೊದಲ್ಲಿ ಪದವಿ,ಪಿಜಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

ವಿಡಿಯೋ ಅಸಿಸ್ಟೆಂಟ್: ಮಾನ್ಯತೆ ಪಡೆದ ಮಂಡಳಿಯಿಂದ 10+2, ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿನಿಮಾಟೋಗ್ರಫಿ,ವೀಡಿಯೋಗ್ರಫಿಯಲ್ಲಿ ಡಿಪ್ಲೊಮಾ ಅಥವಾ ಪದವಿ ಹೊಂದಿರಬೇಕು.

ಪೋಸ್ಟ್ ಪ್ರೊಡಕ್ಷನ್ ಅಸಿಸ್ಟೆಂಟ್: ಮಾನ್ಯತೆ ಪಡೆದ ಮಂಡಳಿಯಿಂದ 10+2  ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಚಲನಚಿತ್ರ ಮತ್ತು ವೀಡಿಯೊ ಸಂಪಾದನೆಯಲ್ಲಿ  ಪದವಿ ಅಥವಾ ಪಿಜಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

ಜನರಲ್ ಅಸಿಸ್ಟೆಂಟ್ : ಪದವಿ ಪೂರ್ಣಗೊಳಿಸಿರಬೇಕು .

ವಯೋಮಿತಿ:

ಸಂಪನ್ಮೂಲ ವ್ಯಕ್ತಿ, ವಿಡಿಯೋ ಸಹಾಯಕ, ಜನರಲ್ ಅಸಿಸ್ಟೆಂಟ್ ಮತ್ತು ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರ ವಯಸ್ಸು 21 ರಿಂದ 40 ವ‍ರ್ಷದೊಳಗಿರಬೇಕು.