ಜೆಇಇ ಅಡ್ವಾನ್ಸ್ಡ್: ಶ್ರೀ ವೆಂಕಟರಮಣ ಕಾಲೇಜಿನ ಪ್ರಣಮ್ಯ ಜಿ.ಎಚ್ ರಾಷ್ಟ ಮಟ್ಟದಲ್ಲಿ 2126 ನೇ ರ‍್ಯಾಂಕ್

ಕುಂದಾಪುರ : ರಾಷ್ಟ್ರಮಟ್ಟದಲ್ಲಿ ಜರುಗಿದ 2023 ನೇ ಸಾಲಿನ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರಣಮ್ಯ ಜಿ.ಎಚ್ ರಾಷ್ಟ ಮಟ್ಟದಲ್ಲಿ ವರ್ಗವಾರು 2126 ನೇ ರ‍್ಯಾಂಕ್ ಪಡೆದು ಅದ್ಭುತ ಸಾಧನೆ ಮಾಡಿದ್ದಾಳೆ.

ವಿದ್ಯಾರ್ಥಿನಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.