ಕಟಪಾಡಿ: ಅ.15 ರಿಂದ 24ರ ವರೆಗೆ ಪ್ರಾಣ ಯೋಗ ಉಚಿತ ಶಿಬಿರ

ಪತಂಜಲಿ ಯೋಗ ಸಮಿತಿ ಉಡುಪಿ, ಕಟಪಾಡಿ ಕಕ್ಷೆ ಹಾಗೂ ಎಸ್ ವಿ ಎಸ್ ಹಳೆ ವಿದ್ಯಾರ್ಥಿ ಸಂಘ (ರಿ) ಕಟಪಾಡಿ ಇವರ ಸಹಯೋಗದಲ್ಲಿ ಅ.15 ರಿಂದ 24ರ ವರೆಗೆ 10 ದಿನಗಳ ಕಾಲ ಬೆಳಿಗ್ಗೆ 5.30ರಿಂದ 6.45 ರತನಕ ಪ್ರಾಣ ಯೋಗ ಉಚಿತ ಶಿಬಿರವನ್ನು ಕಟಪಾಡಿಯ ಮಹಿಳಾ ಮಂಡಲದ ಸಭಾ ಭವನದಲ್ಲಿ ಆಯೋಜಿಸಲಾಗಿದೆ. ಉಡುಪಿ ಪತಂಜಲಿ ಯೋಗ ಸಮಿತಿಯ ನುರಿತ ಹಿರಿಯ ಯೋಗ ಶಿಕ್ಷಕರಿಂದ ತರಬೇತಿ ನೀಡಲಾಗುವುದು.

ಕಟಪಾಡಿ ಪತಂಜಲಿ ಯೋಗ ಸಮಿತಿಯ ಮುಖ್ಯ ಯೋಗ ಶಿಕ್ಷಕ ರಾಜೇಶ್ ಕಾಮತ್ ಶಿಬಿರವನ್ನು ಆಯೋಜಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ನಾಗೇಶ್ ಕಾಮತ್ ಇವರನ್ನು ಈ ಸಂಖ್ಯೆಯಲ್ಲಿ 9886432197 ಸಂಪರ್ಕಿಸಬಹುದು.