ಪ್ರಸಾದ ಶೆಣೈ ಅವರಿಗೆ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯ 2025 ರ ದ್ವಿತೀಯ ಕಥಾ ಪ್ರಶಸ್ತಿ

ಬೆಂಗಳೂರು: ಪ್ರಜಾವಾಣಿ ಪತ್ರಿಕೆಯ ಪ್ರತಿಷ್ಠಿತ ದೀಪಾವಳಿ ಕಥಾ ಸ್ಪರ್ಧೆ 2025 ರ ಪ್ರಶಸ್ತಿಯ ಫಲಿತಾಂಶ ಪ್ರಕಟವಾಗಿದ್ದು ಕತೆಗಾರ ದಯಾನಂದ ಅವರು ಮೊದಲ ಪ್ರಶಸ್ತಿ ಪಡೆದರೆ, ಎರಡನೇ ಕಥಾ ಪ್ರಶಸ್ತಿಯನ್ನು ಕತೆಗಾರ, ಬರಹಗಾರರಾದ ಉಡುಪಿ ಜಿಲ್ಲೆಯ ಕಾರ್ಕಳದ ಪ್ರಸಾದ ಶೆಣೈ ಆರ್ ಕೆ ಅವರು ಪಡೆದುಕೊಂಡಿದ್ದಾರೆ. ಪ್ರಶಸ್ತಿಯು ನಗದು ಮತ್ತು ಪ್ರಶಸ್ತಿಪತ್ರವನ್ನು ಒಳಗೊಂಡಿದೆ. ಪ್ರಸಾದ್ ಶೆಣೈ ಅವರು ಉಡುಪಿXPRESS’ನ ಸಂಪಾದಕರಾಗಿ, ಕ್ರಿಯೇಟಿವ್ ಕಂಟೆಂಟ್ ಹೆಡ್ ಆಗಿ, ಉಪನ್ಯಾಸಕರಾಗಿಯೂ ಸಕ್ರೀಯರಾಗಿದ್ದಾರೆ. “ಲೂಲು ಟ್ರಾವೆಲ್ಸ್” “ಒಂದು ಕಾಡಿನ ಪುಷ್ಪಕ ವಿಮಾನ”, “ನೇರಳೆ ಐಸ್ ಕ್ರೀಂ” ಇವರ ಪ್ರಕಟಿತ ಕೃತಿಗಳು. ಇವರ ಕತೆಗಳಿಗೆ ಪ್ರತಿಷ್ಠತ ಟೋಟೋ ಪುರಸ್ಕಾರ, ವಿಜಯ ಕರ್ನಾಟಕ, ವಿಜಯವಾಣಿ, ಸಂಕ್ರಮಣ ಸ್ಪರ್ಧೆಗಳಲ್ಲಿಯೂ ಪುರಸ್ಕಾರ ಲಭಿಸಿದೆ.