ಬಾಕು, ಅಜೆರ್ಬೈಜಾನ್ ನಲ್ಲಿ ನಡೆಯುತ್ತಿರುವ ಫಿಡೆ ಚೆಸ್ ವಿಶ್ವ ಕಪ್ ಫೈನಲ್ ನ ಗುರುವಾರದ ಎರಡನೇ ಪಂದ್ಯದಲ್ಲಿಯೂ ಭಾರತದ ಆರ್. ಪ್ರಗ್ನಾನಂದ ವಿಶ್ವ ನಂ 1 ಮ್ಯಾಗ್ನಸ್ ಕಾರ್ಲ್ಸನ್ ಮಧ್ಯದ ಪಂದ್ಯವೂ ಕೂಡಾ ಡ್ರಾನಲ್ಲಿ ಕೊನೆಯಾಗಿದೆ.
ಮೊದಲನೇ ಪಂದ್ಯದಲ್ಲಿ ೩೪ ನಡೆಗಳಲ್ಲಿ ಪಂದ್ಯ ಡ್ರಾ ಆಗಿದ್ದರೆ, ಎರಡನೇ ಪಂದ್ಯದಲ್ಲಿ ೩೦ ನಡೆಗಳಲ್ಲಿ ಇಬ್ಬರು ಆಟಗಾರರೂ ಡ್ರಾ ಘೋಷಿಸಿದ್ದಾರೆ.
ಎರಡನೇ ಶಾಸ್ತ್ರೀಯ ಸಮಯ-ನಿಯಂತ್ರಣ ಆಟದ ಸ್ಪರ್ಧೆಯು ಎರಡೂ ಆಟಗಾರರಿಗೆ ಅತ್ಯಂತ ಚಿಕ್ಕದಾಗಿತ್ತು.
ಮ್ಯಾಗ್ನಸ್ ಕಾರ್ಲ್ಸನ್ ಅಹಾರ ಸೇವನೆಯಲ್ಲಿ ವ್ಯತ್ಯಾಸವಾಗಿದ್ದರಿಂದ ಆರೋಗ್ಯ ಸಮಸ್ಯೆಯಿಂಡ ಬಳಲುತ್ತಿದ್ದರೂ ಪಂದ್ಯವನ್ನಾಡಿ ಡ್ರಾ ಮಾಡುವಲ್ಲ ಸಫಲರಾಗಿದ್ದಾರೆ. ಇತ್ತ ಅತ್ಯಾಧಿಕ ಟೈ-ಬ್ರೇಕರ್ ಪಂದ್ಯಗಳನ್ನು ಆಡಿ ಸುಸ್ತಾಗಿರುವ ಪ್ರಗ್ಯಾನಂದ ಮುಂದಿನ ನಿರ್ಣಾಯಕ ಟೈ-ಬ್ರೇಕರ್ ಪಂದ್ಯಕ್ಕೆ ಮತ್ತೊಮ್ಮೆ ಸಜ್ಜಾಗುತ್ತಿದ್ದಾರೆ.
ಒಟ್ಟಾರೆಯಾಗಿ ಚಂದ್ರನ ಮೇಲೊಂದು ಪ್ರಗ್ಯಾನ್ ಭಾರತದ ಕೀರ್ತಿ ಪತಾಕೆಯನ್ನು ಹಾರಿಸುತ್ತಿದ್ದರೆ, ಇತ್ತ ಭಾರತದಲ್ಲಿ ಪ್ರಗ್ಯಾನಂದ ದೇಶದ ಗೌರವವನ್ನು ಹೆಚ್ಚಿಸುತ್ತಿದ್ದಾರೆ.