ಉಡುಪಿ: ಸರಿಯಾದ ಉದ್ಯೋಗಕ್ಕಾಗಿ ಅಲೆದಾಡುತ್ತಿರುವವರಿಗೆ ಅಥವಾ ಹೊಸ ವೃತ್ತಿ ಜೀವನದ ಹುಡುಕಾಟದಲ್ಲಿರುವವರಿಗೆ ಪ್ರಗತಿ ಅಸೋಸಿಯೇಟ್ ಪ್ರಸ್ತುತ ಪಡಿಸುತ್ತಿದೆ 5 ನೇ ಮಹಾ ಉದ್ಯೋಗ ಮೇಳ.
ಆಗಸ್ಟ್ 7 ಭಾನುವಾರದಂದು ಬೆಳಿಗ್ಗೆ 10.00 ರಿಂದ ಸಂಜೆ 5.00 ಗಂಟೆವರೆಗೆ ನಗರದ ಕಿದಿಯೂರು ಹೋಟೆಲಿನ ಪವನ್ ರೂಫ್ ಟಾಪ್ ನಲ್ಲಿ ಉದ್ಯೋಗ ಮೇಳ ನಡೆಯಲಿದ್ದು, ಸ್ಥಳೀಯ ಉದ್ಯಮಗಳು ಹಾಗೂ ಕೈಗಾರಿಕೆಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದು, ಸ್ಥಳೀಯ ವಿದ್ಯಾರ್ಥಿಗಳು ಹಾಗೂ ವೃತ್ತಿ ಅನ್ವೇಷಕರು ಸಂದರ್ಶನದಲ್ಲಿ ಭಾಗವಹಿಸಿ ಕನಸಿನ ಉದ್ಯೋಗವನ್ನು ತಮ್ಮದಾಗಿಸಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಪ್ರವೇಶ, ಯಾವುದೇ ನೋಂದಣಿ ಶುಲ್ಕ ಇರುವುದಿಲ್ಲ.
ನೋಂದಣಿ ಮತ್ತು ಮಾಹಿತಿಗಾಗಿ ಸಂಪರ್ಕಿಸಿ: 9483800865/9480995865