ದೇಶಾದ್ಯಂತ ಅದ್ದೂರಿ ಬಿಡುಗಡೆಗೆ ಇನ್ನೇನು ಕೆಲವೇ ಕ್ಷಣಗಳು ಬಾಕಿ ಇದೆ ಎನ್ನುವಾಗ ‘ಸಲಾರ್: ಭಾಗ 1 – ಸೀಸ್ ಫೈರ್’ ಬಿಗ್-ಬಜೆಟ್ ಚಿತ್ರದ ಬಹುನಿರೀಕ್ಷಿತ ಟ್ರೈಲರ್ ಅನ್ನು ಹೊಂಬಾಳೆ ಫಿಲಮ್ಸ್ ಬಿಡುಗಡೆ ಮಾಡಿದೆ.
ಕೆ.ಜಿ.ಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮತ್ತು ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಮುಖ್ಯ ಪಾತ್ರದಲ್ಲಿರುವ ಸಲಾರ್-1 ರ ಟ್ರೈಲರ್ ಬಿಡುಗಡೆ ಹೊಂದುತ್ತಲೇ ಜನರಲ್ಲಿ ಹುಚ್ಚನ್ನು ಉಂಟುಮಾಡಿದೆ. ಅದಾಗಲೇ ಕೋಟಿ ವೀಕ್ಷಣೆಗಳನ್ನು ದಾಟಿರುವ ಸಲಾರ್ ಅಬ್ಬರಕ್ಕೆ ಚಿತ್ರರಸಿಕರು ಬೇಸ್ತು ಬಿದ್ದಿದ್ದಾರೆ.
ಕೆ.ಜಿ.ಎಫ್ ನಂತೆಯೇ ಸಂಪೂರ್ಣವಾಗಿ ಆಕ್ಷನ್ ಆಧಾರಿತ ಚಿತ್ರದಂತೆ ಭಾಸವಾಗುತ್ತದೆ. ಜಗಪತಿ ಬಾಬು ಮತ್ತು ಶ್ರುತಿ ಹಾಸನ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
‘ಸಲಾರ್’ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಪ್ರಭಾಸ್ ಸಲಾರ್ ಆಗಿ ಕಾಣಿಸಿಕೊಂಡರೆ, ಪೃಥ್ವಿರಾಜ್ ಸುಕುಮಾರನ್ ವರದರಾಜ ಮನ್ನಾರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೃಥ್ವಿರಾಜ್ ತಂದೆ ರಾಜಮನ್ನಾರ್ ಆಗಿ ಜಗಪತಿ ಬಾಬು ಕಾಣಿಸಿಕೊಂಡರೆ, ಆದ್ಯ ಪಾತ್ರದಲ್ಲಿ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದಾರೆ.
ಸಲಾರ್ 400 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗುತ್ತಿದೆ ಎಂದು ವರದಿಯಾಗಿದೆ. ಛಾಯಾಗ್ರಾಹಕ ಭುವನ್ ಗೌಡ, ಸಂಕಲನಕಾರ ಉಜ್ವಲ್ ಕುಲಕರ್ಣಿ ಮತ್ತು ಸಂಗೀತ ಸಂಯೋಜಕ ರವಿ ಬಸ್ರೂರ್ ತಾಂತ್ರಿಕ ತಂಡದಲ್ಲಿ ದುಡಿದಿದ್ದಾರೆ. ಡಿ.22 ರಂದು ದೊಡ್ಡ ಪರದೆಗಳಲ್ಲಿ ಚಿತ್ರವು ರಸಿಕರನ್ನು ರಂಜಿಸಲಿದೆ












